ಸುದೀಪ್ಗೆ ಈ ವಿಷಯ ಗೊತ್ತಾದ್ರೆ ಚರ್ಕವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಕೆ ಮಂಜು
ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಕೊಡುತ್ತಾರೆ ಎಂದು ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದರು. ಅದನ್ನು ‘ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ ಖಂಡಿಸಿದೆ. ಹಿರಿಯ ನಿರ್ಮಾಪಕ ಕೆ. ಮಂಜು ಈ ಬಗ್ಗೆ ಮಾತನಾಡಿದ್ದು, ಸುದೀಪ್ ಅವರಿಗೆ ಈ ವಿಷಯ ಗೊತ್ತಾದರೆ ಚಕ್ರವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ ಎಂದಿದ್ದಾರೆ.
ಕಿಚ್ಚ ಸುದೀಪ್ ಅವರ ಆಪ್ತ ಎನಿಸಿಕೊಂಡಿರೋ ಚಕ್ರವರ್ತಿ ಚಂದ್ರಚೂಡ್ ಸದ್ಯ ವಿವಾದದಲ್ಲಿ ಇದ್ದಾರೆ. ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಕೊಡುತ್ತಾರೆ ಎಂದು ಹೇಳಿದ್ದು ಚರ್ಚೆಗೆ ಕಾರಣ ಆಗಿದೆ. ಈ ವಿಷಯದ ಬಗ್ಗೆ ಹಿರಿಯ ನಿರ್ಮಾಪಕ ಕೆ. ಮಂಜು ಮಾತನಾಡಿದ್ದಾರೆ. ‘ಸುದೀಪ್ ಅವರು ಈ ರೀತಿಯ ವ್ಯಕ್ತಿಗಳನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ. ಬಹುಶಃ ಅವರಿಗೆ ಈ ವಿಷಯ ಗೊತ್ತಾಗಿಲ್ಲ ಅನಿಸುತ್ತದೆ. ಗೊತ್ತಾದ್ರೆ ಬೇಸರ ಆಗುತ್ತದೆ. ಅವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲ್ಲ’ ಎಂದಿದ್ದಾರೆ ಮಂಜು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
