ಕರೆಂಟ್ ಬಿಲ್‌ ಕೇಳಿದ್ರೆ ನಿಮ್ಮನ್ನೆ ಕಟ್ಟಿ ಹಾಕುತ್ತೇವೆ: ಮಂಡ್ಯ ವ್ಯಕ್ತಿಯ ಟಿಕ್​ ಟಾಕ್​ ವಿಡಿಯೋ ವೈರಲ್​

Updated on: May 26, 2023 | 8:27 PM

ಉಚಿತ ಭಾಗ್ಯಗಳಿಂದಾಗಿ ಚೆಸ್ಕಾಂ ಸಿಬ್ಬಂದಿಗಳು ಪೇಚಿಗೆ ಸಿಲುಕಿದಂತಾಗಿದೆ. ಮಂಡ್ಯದ ಕೆರಗೊಡಿನಲ್ಲಿ ವ್ಯಕ್ತಿ ಓರ್ವ ಸಿದ್ದರಾಮಯ್ಯ ಡೈಲಾಗ್‌ಗೆ ಟಿಕ್ ಟಾಕ್ ಮಾಡಿದ್ದು, ವಿಡಿಯೋ ವೈರಲ್​ ಆಗಿದೆ.

ಮಂಡ್ಯ: ಕಾಂಗ್ರೆಸ್ (Congress)​ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಘೋಷಿಸಿತ್ತು. ಸದ್ಯ ಈ ಉಚಿತ ಭಾಗ್ಯಗಳಿಂದಾಗಿ ಚೆಸ್ಕಾಂ ಸಿಬ್ಬಂದಿಗಳು ಪೇಚಿಗೆ ಸಿಲುಕಿದಂತಾಗಿದೆ. ಬಿಲ್​ ಕಟ್ಟಿ ಎಂದು ಮನೆಗೆ ಹೋದರೆ ಸಾಕು ಜನರು ಟಿಕ್ ಟಾಕ್ ಮಾಡಿವಂತಾಗಿದೆ. ಮಂಡ್ಯದ ಕೆರಗೊಡಿನಲ್ಲಿ ವ್ಯಕ್ತಿ ಓರ್ವ ಸಿದ್ದರಾಮಯ್ಯ ಡೈಲಾಗ್‌ಗೆ ಟಿಕ್ ಟಾಕ್ ಮಾಡಿದ್ದು, ವಿಡಿಯೋ ವೈರಲ್​ ಆಗಿದೆ. ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ ಈ ಹಿಂದೆ ಸಿದ್ದರಾಮಯ್ಯ ಹೇಳಿದ್ದರು. ವಿದ್ಯುತ್ ಬಿಲ್ ವಸೂಲಿಗೆ ಹೋದ ಸಿಬ್ಬಂದಿಗಳಿಗೆ ವ್ಯಕ್ತಿ ಸಿದ್ದರಾಮಯ್ಯ ಡೈಲಾಗ್ ಹೊಡೆದಿದ್ದಾರೆ. ಈಗ ಕರೆಂಟ್ ಬಿಲ್ ಕಟ್ಟಣ್ಣ ಎಂದ ಚೆಸ್ಕಾಂ ಸಿಬ್ಬಂದಿಗಳಿಗೆ ಕರೆಂಟ್ ಬಿಲ್‌ ಕೇಳಿದ್ರೆ ನಿಮ್ಮನ್ನೆ ಕಟ್ಟಿ ಹಾಕುತ್ತೇವೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 26, 2023 08:26 PM
Loading...
Unable to load recommendations.
Follow Us
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More