Mandya: ತಂದೆ ಕೆಲಸ ಮಾಡುವ ಠಾಣೆಯಲ್ಲೇ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ಆರಂಭಿಸಿದ ಮಗಳು!
ಪಿಎಸ್ಐ ವೆಂಕಟೇಶ್ ತಮ್ಮ ಮತ್ತು ತಮ್ಮ ಮಗಳ ಬಗ್ಗೆ ಭಾವುಕವಾಗಿ ಮಾತಾಡಿದ್ದಾರೆ.
ಮಂಡ್ಯ: ಸಕ್ಕರೆ ನಾಡಿನ ಈ ತಂದೆ ಮಗಳ ಜೋಡಿ ಎಲ್ಲರನ್ನು ಭಾವುಕರಾಗಿಸುತ್ತದೆ. ಇವರಿಬ್ಬರು ದೇಶ ಸೇವೆ ಮತ್ತು ಸಾರ್ವಜನಿಕ ಸೇವೆಗೆ ತಮ್ಮ ಬದುಕಿಗಳನ್ನು ಮುಡುಪಾಗಿಟ್ಟಿದ್ದಾರೆ. ಇವರ ಕತೆಯ ಅತ್ಯಂತ ಸೊಬಗಿನ ಭಾಗವೆಂದರೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (police sub inspector) ಆಗಿ ನೇಮಕಗೊಂಡಿರುವ ಯುವತಿ ವರ್ಷಾ (Varsha), ಕಳೆದ 14 ವರ್ಷಗಳಿಂದ ತನ್ನ ತಂದೆ (Venkatesh) ವೆಂಕಟೇಶ್ ಪಿಎಸ್ಐ ಆಗಿ ಸೇವೆ ಸಲ್ಲಿಸುತ್ತಿರುವ ನಗರದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲೇ ಸೇವೆ ಆರಂಭಿಸಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿದ್ದು! ಪೊಲೀಸ್ ಸೇವೆಗೆ ಬರುವ ಮೊದಲು ವೆಂಕಟೇಶ್ ಭಾರತೀಯ ಸೇನೆಯಲ್ಲಿ 16-ವರ್ಷ ಸೇವೆ ಸಲ್ಲಿಸಿದ್ದರು ಮತ್ತು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದ್ದರು. ಅವರು ತಮ್ಮ ಮತ್ತು ತಮ್ಮ ಮಗಳ ಬಗ್ಗೆ ಭಾವುಕವಾಗಿ ಮಾತಾಡಿದ್ದಾರೆ. ಈ ಕತೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವವರಿಗೆ ನಿಶ್ಚಿತವಾಗಿಯೂ ಸ್ಫೂರ್ತಿದಾಯಕವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ