Watch Video: ದೇವರನ್ನೂ ಬೆಂಬಿಡದ ಕಳ್ಳಸಾಗಣೆದಾರರು! ದೇವರ ರಥದಲ್ಲಿ ಕೋಟ್ಯಂತರ ಮೌಲ್ಯದ ಗಾಂಜಾ ಸಾಗಣೆ
ಒಂದು ಬದಿಯಲ್ಲಿ ಶಿರಡಿ ಸಾಯಿಬಾಬಾ ಮತ್ತು ಇನ್ನೊಂದು ಬದಿಯಲ್ಲಿ ಹನುಮಂತನ ವಿಗ್ರಹವನ್ನು ಜೋಡಿಸಿ, ರಥವನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಮಾದಕವಸ್ತು ಸಾಗಿಸಲಾಗಿದೆ. ಆದರೆ ಭದ್ರಾಚಲಂ ಪೊಲೀಸರು ದುಷ್ಕರ್ಮಿಗಳ ದುಸ್ಸಾಹಸವನ್ನು ಛಿದ್ರಗೊಳಿಸಿದ್ದಾರೆ.
ಕಪಟಿಗಳು ಭಕ್ತರ ಸೋಗಿನಲ್ಲಿ ಗಾಂಜಾ ಸಾಗಣೆ ಮಾಡಿದ್ದಾರೆ. ಆದರೆ ಇವರು ಭಕ್ತರಲ್ಲ. ಸಾಮಾನ್ಯವಾಗಿ ದೇವರ ನಾಮವನ್ನು ಕೇಳಿದಾಗ ನಾವು ಎರಡೂ ಕೈಗಳನ್ನು ಮಡಚಿ ನನ್ನ ತಪ್ಪುಗಳನ್ನು ಕ್ಷಮಿಸು ಭಗವಂತಾ ಎಂದು ಕೆನ್ನೆಗಳಿಗೆ ಬಾರಿಸಿಕೊಂಡು ದಂಡಿಸುತ್ತೇನೆ. ಆದರೆ ಮುಸುಕುಧಾರಿ ಭಕ್ತ ಸಮೂಹ 1 ಕೋಟಿ 20 ಲಕ್ಷ ಮೌಲ್ಯದ 484 ಕೆಜಿ ತೂಕದ ಗಾಂಜಾವನ್ನು ಸುಂದರವಾಗಿ ಅಲಂಕರಿಸಿದ ಹನುಮಂತನ ವಿಗ್ರಹ ಜೋಡಿಸಿಟ್ಟಿದ್ದ ಪ್ರಚಾರ ರಥದಲ್ಲಿ ಸಾಗಿಸಿದ್ದಾರೆ.
ಒಂದು ಬದಿಯಲ್ಲಿ ಶಿರಡಿ ಸಾಯಿಬಾಬಾ ಮತ್ತು ಇನ್ನೊಂದು ಬದಿಯಲ್ಲಿ ಹನುಮಂತನ ವಿಗ್ರಹವನ್ನು ಜೋಡಿಸಿ, ರಥವನ್ನು ಮೆರವಣಿಗೆ ಮೂಲಕ ಕೊಂಡೊಯ್ಯದು ಮಾದಕವಸ್ತು ಸಾಗಿಸಲಾಗಿದೆ. ಆದರೆ ಭದ್ರಾಚಲಂ ಪೊಲೀಸರು ದುಷ್ಕರ್ಮಿಗಳ ದುಸ್ಸಾಹಸವನ್ನು ಛಿದ್ರಗೊಳಿಸಿದ್ದಾರೆ. ಕೊನೆಗೆ ಗಾಂಜಾ ಸಾಗಿಸುತ್ತಿದ್ದ ರೀತಿ ನೋಡಿ ಪೊಲೀಸರೇ ಅಚ್ಚರಿಗೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ