ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ

|

Updated on: Oct 04, 2024 | 2:42 PM

ಇಂದು(ಶುಕ್ರವಾರ) ಬೀದರ್​ ನಗರದ ಎಸ್‌ ಪಿ ಕಚೇರಿ ಅವರಣದಲ್ಲಿ ರೌಡಿ ಪರೇಡ್​ ನಡೆಸಲಾಯಿತು. ಈ ವೇಳೆ ಕೆಲ ರೌಡಿಶೀಟರ್(Rowdy sheeter)​ಗಳ ಬೆವರಿಳಿಸಿದ ಎಸ್‌ ಪಿ ಪ್ರದೀಪ್‌ ಗುಂಟಿ, ಜಿಲ್ಲೆಯಲ್ಲಿ ರೌಡಿಸಂ ಮಟ್ಟ ಹಾಕಿ, ಶಾಂತತೆ ಕಾಪಾಡುವುದೇ ನಮ್ಮ ಇಲಾಖೆಯ ಗುರಿ ಎಂದರು.

ಬೀದರ್‌, ಅ.04: ಬೀದರ್​​ನಲ್ಲಿ ಅಕ್ರಮ ಚಟುವಟಿಕೆಗೆ ಮಟ್ಟ ಹಾಕುವ ಸಲುವಾಗಿ ಇಂದು(ಶುಕ್ರವಾರ) ನಗರದ ಎಸ್‌ ಪಿ ಕಚೇರಿ ಅವರಣದಲ್ಲಿ ರೌಡಿ ಪರೇಡ್​ ನಡೆಸಲಾಯಿತು. ಈ ವೇಳೆ ಕೆಲ ರೌಡಿಶೀಟರ್(Rowdy sheeter)​ಗಳ ಬೆವರಿಳಿಸಿದ ಎಸ್‌ ಪಿ ಪ್ರದೀಪ್‌ ಗುಂಟಿ, ಜಿಲ್ಲೆಯಲ್ಲಿ ರೌಡಿಸಂ ಮಟ್ಟ ಹಾಕಿ, ಶಾಂತತೆ ಕಾಪಾಡುವುದೇ ನಮ್ಮ ಇಲಾಖೆಯ ಗುರಿ ಎಂದರು. ಅಷ್ಟೇ ಅಲ್ಲ, ರೌಡಿ ಪರೇಡ್​ನಲ್ಲಿ ಹಾಜರಾಗದವರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದರು. ಜೊತೆಗೆ ಯಾಕೆ ಕೆಲ ರೌಡಿಶೀಟರ್​ಗಳು ಬಂದಿಲ್ಲ ಎಂದು ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on