ಬೆಂಗಳೂರು: ದಾಬಸ್​ಪೇಟೆ ಹೆದ್ದಾರಿಯಲ್ಲಿ ದರೋಡೆ ಮಾಡ್ತಿದ್ದ ರೌಡಿಶೀಟರ್ ಕಾಲಿಗೆ ಗುಂಡೇಟು

ಪಲ್ಸರ್​ ಬೈಕ್​ನಲ್ಲಿ ಬಂದು ದಾಬಸ್​ಪೇಟೆ ಹೆದ್ದಾರಿಯಲ್ಲಿ ದರೋಡೆಗೆ ಯತ್ನಿಸಿದ್ದ ರೌಡಿಶೀಟರ್ ಕಾಲಿಗೆ ಪೊಲೀಸ್ ಇನ್ಸ್​​ಪೆಕ್ಟರ್ ಗುಂಡೇಟು ಹೊಡದಿದ್ದಾರೆ. ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಹೆಡ್​ ಕಾನ್ಸ್​ಟೇಬಲ್​ ಇಮ್ರಾನ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಇನ್ಸ್​​ಪೆಕ್ಟರ್ ರಾಜು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ.

ಬೆಂಗಳೂರು: ದಾಬಸ್​ಪೇಟೆ ಹೆದ್ದಾರಿಯಲ್ಲಿ ದರೋಡೆ ಮಾಡ್ತಿದ್ದ ರೌಡಿಶೀಟರ್ ಕಾಲಿಗೆ ಗುಂಡೇಟು
ಬೆಂಗಳೂರು: ದಾಬಸ್​ಪೇಟೆ ಹೆದ್ದಾರಿಯಲ್ಲಿ ದರೋಡೆ ಮಾಡ್ತಿದ್ದ ರೌಡಿಶೀಟರ್ ಕಾಲಿಗೆ ಗುಂಡೇಟು
Follow us
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 02, 2024 | 3:42 PM

ಬೆಂಗಳೂರು ಗ್ರಾಮಾಂತರ, ಆ.31: ನೆಲಮಂಗಲ (Nelamangala) ಸುತ್ತಾ ಮುತ್ತಾ ಹೆದ್ದಾರಿಯಲ್ಲಿ ದರೋಡೆ ನಡೆದಿದೆ ಅಂದ್ರೆ ಮೊದಲು ಪೊಲೀಸರಿಗೆ ನೆನಪಾಗುತ್ತಿದ್ದದ್ದೆ ಆ ಕುಖ್ಯಾತ ದರೋಡೆಕೋರ, ಸುಮಾರು 56 ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್‌ನನ್ನು ಬಂಧಿಸಿಸಲು ಯತ್ನಿಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ. ಈಗಾಗಲೇ 4 ವರ್ಷದ ಹಿಂದೆ ಪೊಲೀಸರ ಗುಂಡಿನೇಟು ತಿಂದಿದ್ದ ಆಸಾಮಿ ಕಾಲಿಗೆ ಇಂದು ಮತ್ತೆ ಡಾಬಸ್‌ಪೇಟೆ ಪೊಲೀಸರು ಗುಂಡು ಹಾರಿಸಿದ್ದಾರೆ.

ನೀಲಗಿರಿ ತೋಪಿನಲ್ಲಿ ಬಿದ್ದಿರುವ ಎರಡು ಬೈಕ್‌ಗಳು, ಆಸ್ಪತ್ರೆಯ ಒಂದು ಬೆಡ್‌ ಮೇಲೆ ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌ ಚಿಕಿತ್ಸೆ ಪಡೆಯುತ್ತಿದ್ದರೆ ಮತ್ತೊಂದು ಬೆಡ್‌ ನಲ್ಲಿ ರೌಡಿ ಶೀಟರ್‌ ಒಬ್ಬ ಕಾಲೀಗೆ ಗುಂಡು ತಗುಲಿಸಿಕೊಂದು ನೋವಿನಿಂದ ನರಳುತ್ತಿರುವ ರೌಡಿ ಶೀಟರ್.‌ ಈ ರೀತಿಯ ಸಿಮಿಮೀಯಾ ಶೈಲಿಯ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆಯಲ್ಲಿ. ಈಗೆ ಕಾಲಿಗೆ ಗುಂಡು ಹೊಡೆಸಿಕೊಂಡು ಆಸ್ಪತ್ರಯ ಬೆಡ್‌ ಮೇಲೆ ಮಲಗಿರುವ ರೌಡಿಶೀಟರ್‌ ಹೆಸರು ಜಯಂತ್‌ ಅಲಿಯಾಸ್ ಬ್ಯಾಟರಿ ಜಯಂತ್. ಬ್ಯಾಟರಿ ಕಳ್ಳತನದ ಮೂಲಕ ರಾಬರಿ ಫೀಲ್ಡ್‌ಗೆ ಇಳಿದಿದ್ದ ಜಯಂತ್‌ ರಾಬರಿ ಮಾಡುವುದನ್ನೆ ನಿತ್ಯ ಕಾಯಕ ಮಾಡಿಕೊಂಡು ಪೊಲೀಸರ ನಿದ್ದೆ ಗೆಡಿಸಿದ್ದ. ರಾಬರಿ ಪ್ರಕರಣವೊಂದರಲ್ಲಿ ಜಯಂತ್‌ನನ್ನು ಬಂದಿಸಲು ತೆರಳಿದ್ದ ವೇಳೆ ಪೊಲೀಸ್‌ ಕಾನ್ಸ್‌ಟೇಬಲ್‌ ಇಮ್ರಾನ್‌ ಮೇಲೆ ಚಾಕುವಿನಿಂದ ಹಲ್ಲೆಗೆ ನಡೆಸಿದ್ದು ಈ ವೇಳೆ ಜೀವ ರಕ್ಷಣೆಗಾಗಿ ಡಾಬಸ್‌ಪೇಟೆ ಇನ್ಸ್‌ಪೆಕ್ಟರ್‌ ರಾಜು ತಮ್ಮ ಬಳಿಯಿದ್ದ ಪಿಸ್ತೂಲ್‌ನಿಂದ ಒಂದು ಭಾರಿ ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಜಯಂತ್‌ನ ಕಾಲಿಗೆ ಗುಂಡು ಹಾರಿಸಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ವಸತಿ ಶಾಲೆಯಲ್ಲಿ SSLC ವಿದ್ಯಾರ್ಥಿನಿ ನೇಣಿಗೆ ಶರಣು: ನದಿಯಲ್ಲಿ ಮುಳುಗಿ ಗ್ರಾ.ಪಂ ಸದಸ್ಯ ಸಾವು

ರಾಬರಿ ಪ್ರಕರಣವೊಂದರಲ್ಲಿ ಜಯಂತ್‌ನನ್ನು ಪೊಲೀಸರು ಹುಡುಕುತಿದ್ದ ವೇಳೆ ಜಯಂತ್‌ ಮತ್ತೊಂದು ರಾಬರಿಗೆ ಹೊಂಚುಹಾಕಿದ್ದಾನೆ ಎಂದು ಡಾಬಸ್‌ಪೇಟೆ ಪೊಲೀಸರಿಗೆ ಖಚಿತ ಮಾಹಿತಿ ದೊರೆಕಿದೆ. ಮಾಹಿತಿ ಆದರಿಸಿ ಜಯಂತ್‌ನನ್ನು ಬಂದಿಸಲು ಶಿವಗಂಗೆಯ ಶಾರದಾ ಕ್ರಾಸ್‌ ಬಳಿ ಕಾನ್ಸ್‌ಟೇಬಲ್‌ಗಳಾದ ಸುನೀಲ್‌ ಹಾಗೂ ಇಮ್ರಾನ್‌ ಬೈಕ್‌ನಲ್ಲಿ ಬಂದಿದ್ದರು ಇನ್ಸ್‌ಪೆಕ್ಟರ್‌ ರಾಜು ಜೀಪ್‌ ನಲ್ಲಿ ಬಂದಿದ್ದಾರೆ. ಪೊಲೀಸರನ್ನು ಗಮನಿಸಿದ ಬ್ಯಾಟರಿ ಜಯಂತ್‌ ತನ್ನ ಪಲ್ಸರ್‌ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ.

ಆರೋಪಿಯನ್ನು ತಮ್ಮ ಬೈಕ್‌ನಲ್ಲಿ ಕಾನ್ಸ್‌ಟೇಬಲ್‌ಗಳು ಅಡ್ಡಗಟ್ಟಿದಾಗಿ ಎರಡು ಬೈಕ್‌ಗಳು ಒಂದಕ್ಕೊಂದು ಡಿಕ್ಕಿಯಾಗಿ ನೆಲಕ್ಕೆ ಬಿದ್ದಿದ್ದಾರೆ. ಬಳಿಕ ‌ಸಿಬ್ಬಂದಿ ಇಮ್ರಾನ್ ಜಯಂತ್‌ನನ್ನು ಹಿಡಿದುಕೊಂಡಾಗ ಇಮ್ರಾನ್‌ ಮೇಲೆ ಪೆಪ್ಪರ್‌ ಸ್ಪ್ರೇ ಒಡೆದು ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌ ರಾಜು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ತಿಳಿಸಿದ್ದಾರೆ, ಆದ್ರೆ ಆರೋಪಿ ಜಯಂತ್‌ ಹಲ್ಲೆಯನ್ನು ಮುಂದುವರೆಸಿದ್ದರಿಂದ ತಮ್ಮ ಸಿಬ್ಬಂದಿಯಾದ ಇಮ್ರಾನ್‌ ಆತ್ಮ ರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ರಾಜು ತಮ್ಮ ಬಳಿ ಇದ್ದ ಪಿಸ್ತೂಲ್‌ನಿಂದ ಬ್ಯಾಟರಿ ಜಯಂತನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ರೌಡಿಶೀಟರ್​​ಗಳ ನಡುವೆ ಮಾರಾಮಾರಿ, ಪೊಲೀಸರ ಗುಂಡೇಟು

ಇನ್ನೂ ಆರೋಪಿ ಜಯಂತ ಕೊಲೆ, ಕೊಲೆಯತ್ನ, ಕಳ್ಳತನ, ದರೋಡೆ ಸೇರಿದಂತೆ 56 ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ ಆಗಿದ್ದಾನೆ. ಅಲ್ಲದೆ 2019ರಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ಇದೇ ಡಾಬಸ್‌ಪೇಟೆ ಪೊಲೀಸರು ಬಂಧಿಸಲು ಯತ್ನಿಸಿದ ಸಂಧರ್ಭದಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ವೀರನಂಜೀಪುರ ಅರಣ್ಯ ಪ್ರದೇಶದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಮೊದಲ ಭಾರಿ ಗುಂಡೇಟು ತಿಂದಿದ್ದ. ಆದರೂ ಚಾಳಿ ಬಿಡದ ಬ್ಯಾಟರಿ ಜಯಂತ್‌ ಮೇಲೆ ಪೊಲೀಸರು ಎರಡನೇ ಭಾರಿಗೆ ಗುಂಡಿನ ದಾಳಿ ನಡೆಸಿದ್ದಾರೆ.

ಸದ್ಯ ಗಾಯಾಳುಗಳಾದ ಆರೋಪಿ ಜಯಂತ್‌ ಹಾಗೂ ಕಾನ್ಸ್‌ಟೆಬಲ್‌ ಇಮ್ರಾನ್‌ ಡಾಬಸ್‌ಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಎರಡು ಭಾರಿ ಪೊಲೀಸರ ಮೇಲೆ ಹಲ್ಲೆಗ ಯತ್ನಿಸಿ ಗುಂಡೇಟು ತಿಂದ ಜಯಂತ್‌ ಮೇಲೆ ಪೊಲೀಸರು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:11 pm, Sat, 31 August 24

ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ದರ್ಶನ್​ಗೆ ಜಾಮೀನು: ತೂಗುದೀಪ ನಿಲಯದ ಬಳಿ ಅಭಿಮಾನಿಗಳ ಸಂಭ್ರಮ
ದರ್ಶನ್​ಗೆ ಜಾಮೀನು: ತೂಗುದೀಪ ನಿಲಯದ ಬಳಿ ಅಭಿಮಾನಿಗಳ ಸಂಭ್ರಮ
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸಿಎಂರನ್ನು ಭೇಟಿಯಾಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಕಾಶೀನಾಥಯ್ಯ
ಸಿಎಂರನ್ನು ಭೇಟಿಯಾಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಕಾಶೀನಾಥಯ್ಯ