ಉಡುಪಿ: ಕಳ್ಳತನ ಮಾಡ್ತಿದ್ದಾಗಲೇ ಸಿಕ್ಕಿಬಿದ್ದ ಕಳ್ಳ; ಮುಂದೇನಾಯ್ತು?
ಕಳ್ಳತನ ಮಾಡುತ್ತಿರುವಾಗಲೇ ಸಿಸಿ ಕ್ಯಾಮೆರಾ ಲೈವ್ ಸ್ಟ್ರೀಮ್ ಆಧರಿಸಿ ಕಳ್ಳನನ್ನು ಸೆರೆ ಹಿಡಿದ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾತ್ರಿ 1: 45ರ ಸುಮಾರಿಗೆ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘ ಹೊಸಾಡು ಕಚೇರಿಯ ಕಿಟಕಿ ಮುರಿದು ಕಳ್ಳ ಒಳ ನುಗ್ಗಿದ್ದಾನೆ.
ಉಡುಪಿ, ಜೂ.22: ಕಳ್ಳತನ ಮಾಡುತ್ತಿರುವಾಗಲೇ ಸಿಸಿ ಕ್ಯಾಮೆರಾ ಲೈವ್ ಸ್ಟ್ರೀಮ್ ಆಧರಿಸಿ ಕಳ್ಳನನ್ನು ಸೆರೆ ಹಿಡಿದ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾತ್ರಿ 1: 45ರ ಸುಮಾರಿಗೆ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘ ಹೊಸಾಡು ಕಚೇರಿಯ ಕಿಟಕಿ ಮುರಿದು ಕಳ್ಳ ಒಳ ನುಗ್ಗಿದ್ದಾನೆ. ಲೈವ್ ಮಾನಿಟರಿಂಗ್ ಮೂಲಕ ಕಳ್ಳನ ಚಲನವಲನ ಗಮನಿಸಿದ ಕುಂದಾಪುರ ಮೂಲದ ಸೈನ್ ಇನ್ ಸಿಸಿ ಕ್ಯಾಮೆರಾ ಲೈವ್ ಮಾನಿಟರಿಂಗ್ ಸಂಸ್ಥೆ, ಪೊಲೀಸರಿಗೆ ಮಾಹಿತಿ ನೀಡಿದೆ. ಈ ಹಿನ್ನಲೆ 10 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ತೆರಳಿ, ಕಳ್ಳನನ್ನ ಪೊಲೀಸರು ಬಂಧಿಸಿದ್ದಾರೆ. ಕಳ್ಳತನದ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ