ಅಧಿಕಾರಿಗಳ ಸಭೆಯಲ್ಲಿ ನಿದ್ದೆಗೆ ಜಾರಿದ ನೂತನ ಎಂಎಲ್‌ಸಿ ಎ ವಸಂತಕುಮಾರ್

|

Updated on: Jun 21, 2024 | 2:46 PM

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ನೂತನ ವಿಧಾನಪರಿಷತ್ ಸದಸ್ಯ ಎ.ವಸಂತಕುಮಾರ್ (A. Vasantakumar) ಅವರು ಭರ್ಜರಿ ನಿದ್ದೆಗೆ ಜಾರಿರುವ ಘಟನೆ ನಡೆದಿದೆ. ಬಿಸಿ ಬಿಸಿ ಚರ್ಚೆಯ ನಡುವೆ ಎಂಎಲ್​ಸಿ ಅವರು ಗಡದ್​ ನಿದ್ದೆಗೆ ಜಾರಿದ್ದಾರೆ.

ರಾಯಚೂರು, ಜೂ.21: ಅಧಿಕಾರಿಗಳ ಸಭೆಯಲ್ಲಿ ನೂತನ ವಿಧಾನಪರಿಷತ್ ಸದಸ್ಯ ಎ.ವಸಂತಕುಮಾರ್ (A. Vasantakumar) ಅವರು ಭರ್ಜರಿ ನಿದ್ದೆಗೆ ಜಾರಿರುವ ಘಟನೆ ರಾಯಚೂರು (Raichur) ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದಿದೆ. ಇಂದು(ಜೂ.21) ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೇತೃತ್ವದಲ್ಲಿ ಕುಡಿಯುವ ನೀರು, ಅತಿವೃಷ್ಟಿ, ಬೀಜ ಮತ್ತು ರಸಗೊಬ್ಬರ ದಾಸ್ತಾನು ಬೇಡಿಕೆ ಪೂರೈಕೆ ಕುರಿತು ಸಭೆ ನಡೆಸಲಾಗಿತ್ತು. ಈ ವೇಳೆ ಸಭೆಯಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ನೂತನ ಎಂಎಲ್‌ಸಿ ಎ.ವಸಂತಕುಮಾರ್ ನಿದ್ದೆಗೆ ಜಾರಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ