Sanju Samson: 6,6,6,6,6… ಒಂದೇ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿದ ಸಂಜು! ವಿಡಿಯೋ ನೋಡಿ
IND vs BAN: ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಸಂಜು ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್ ಬಾರಿಸಿ ಐತಿಹಾಸಿಕ ಸಾಧನೆ ಮಾಡಿದರು ರಿಶಾದ್ ಹುಸೇನ್ ಎಸೆದ 10ನೇ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಸಂಜು ಓವರ್‌ನಲ್ಲಿ ಒಟ್ಟು 30 ರನ್ ಕಲೆಹಾಕಿದರು. ಆ ಬಳಿಕ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಸಂಜು, ಆ ನಂತರವೂ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿದರು.
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ರೌದ್ರಾವತಾರ ತಾಳಿದ ಸಂಜು ಸ್ಯಾಮ್ಸನ್ ಬಾಂಗ್ಲಾ ಬೌಲರ್ಗಳ ಬೆಂಡೆತ್ತಿದಲ್ಲದೆ, ಚೆಂಡಿಗೆ ಅಷ್ಟ ದಿಕ್ಕುಗಳ ದರ್ಶನ ಮಾಡಿದರು. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಸಂಜು ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್ ಬಾರಿಸಿ ಐತಿಹಾಸಿಕ ಸಾಧನೆ ಮಾಡಿದರು ರಿಶಾದ್ ಹುಸೇನ್ ಎಸೆದ 10ನೇ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಸಂಜು ಓವರ್‌ನಲ್ಲಿ ಒಟ್ಟು 30 ರನ್ ಕಲೆಹಾಕಿದರು. ಆ ಬಳಿಕ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಸಂಜು, ಆ ನಂತರವೂ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿದರು.
ತಮ್ಮ ಖೋಟಾದ ಮೊದಲ ಓವರ್‌ನಲ್ಲಿ 16 ರನ್ ನೀಡಿದ್ದ ಹುಸೇನ್, ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಮತ್ತಷ್ಟು ದುಬಾರಿಯಾದರು. ಓವರ್‌ನ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಆದರೆ ಮುಂದಿನ ಎಸೆತವನ್ನು ಸ್ಟ್ರೈಟ್ ಹಿಟ್ ಮಾಡಿ ಸಿಕ್ಸರ್ ಬಾರಿಸಿದ ಸಂಜು, ಓವರ್‌ನ ಮೂರನೇ ಎಸೆತದವನ್ನು ಲಾಂಗ್-ಆಫ್ ಕಡೆಗೆ ಸಿಕ್ಸರ್ ಬಾರಿಸಿದರು.
ಆ ಬಳಿಕ ಉಳಿದ ಮೂರು ಎಸೆತಗಳಲ್ಲಿ ಸಿಕ್ಸರ್ ಸಿಡಿಸುವಲ್ಲಿ ಸಂಜು ಯಶಸ್ವಿಯಾದರು. ಸ್ಯಾಮ್ಸನ್ರ ಈ ಸಿಕ್ಸರ್ಗಳ ಸುರಿಮಳೆ ನೋಡಿದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಮುಗುಳ್ನಗುತ್ತಲೇ ಇದ್ದರು. ರಿಷಾದ್ ಹುಸೇನ್ ಅವರ ಈ ಓವರ್‌ಗೂ ಮುನ್ನ ಸಂಜು ಸ್ಯಾಮ್ಸನ್ 29 ಎಸೆತಗಳಲ್ಲಿ 62 ರನ್ ಗಳಿಸಿದ್ದರು. ಇನಿಂಗ್ಸ್ನ 10ನೇ ಓವರ್ ಮುಗಿದ ನಂತರ ಅವರ ಸ್ಕೋರ್ 35 ಎಸೆತಗಳಲ್ಲಿ 92 ರನ್ ಆಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ