IND vs NZ: ಸೋಫಿ ಡಿವೈನ್ ದಿವ್ಯ ನಿರ್ಲಕ್ಷ್ಯ; ಕಿವೀಸ್ ತಂಡಕ್ಕೆ ಸೋಲು

|

Updated on: Oct 24, 2024 | 9:51 PM

IND vs NZ: ಕಿವೀಸ್ ತಂಡದ ಈ ಧಯನೀಯ ಪ್ರದರ್ಶನಕ್ಕೆ ತಂಡದ ಬ್ಯಾಟಿಂಗ್ ವಿಭಾಗ ಕೈಕೊಟ್ಟಿದ್ದೆ ಪ್ರಮುಖ ಕಾರಣವಾಗಿತ್ತು. ಅದರಲ್ಲೂ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ನಾಯಕಿ ಸೋಫಿ ಡಿವೈನ್ ತಾವು ಮಾಡಿಕೊಂಡ ಎಡವಟ್ಟಿನಿಂದ ವಿಕೆಟ್ ಕೈಚೆಲ್ಲಿದ್ದು, ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ನ್ಯೂಜಿಲೆಂಡ್ ಮಹಿಳಾ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಪ್ರಬಲ ಪ್ರದರ್ಶನ ನೀಡಿ 59 ರನ್‌ಗಳಿಂದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ಮಂಧಾನ ನಾಯಕತ್ವ ವಹಿಸಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 44.3 ಓವರ್‌ಗಳಲ್ಲಿ 227 ರನ್ ಗಳಿಸಿತು. ಉತ್ತರವಾಗಿ ನ್ಯೂಜಿಲೆಂಡ್ ತಂಡ 40.4 ಓವರ್‌ಗಳಲ್ಲಿ 168 ರನ್‌ಗಳಿಗೆ ಸೋಲನುಭವಿಸಿತು. ಕಿವೀಸ್ ತಂಡದ ಈ ಧಯನೀಯ ಪ್ರದರ್ಶನಕ್ಕೆ ತಂಡದ ಬ್ಯಾಟಿಂಗ್ ವಿಭಾಗ ಕೈಕೊಟ್ಟಿದ್ದೆ ಪ್ರಮುಖ ಕಾರಣವಾಗಿತ್ತು. ಅದರಲ್ಲೂ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ನಾಯಕಿ ಸೋಫಿ ಡಿವೈನ್ ತಾವು ಮಾಡಿಕೊಂಡ ಎಡವಟ್ಟಿನಿಂದ ವಿಕೆಟ್ ಕೈಚೆಲ್ಲಿದ್ದು, ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಸೋಫಿ ಡಿವೈನ್ ದಿವ್ಯ ನಿರ್ಲಕ್ಷ್ಯ

ಭಾರತದ ಸ್ಪಿನ್ನರ್ ದೀಪ್ತಿ ಶರ್ಮಾ ಬೌಲ್ ಮಾಡಿದ 12ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತು. ಈ ಓವರ್‌ನ ಕೊನೆಯ ಎಸೆತವನ್ನು ಎದುರಿಸಿದ ಸೋಫಿ ಡಿವೈನ್ ಡಿಫೆಂಡ್ ಮಾಡುವಲ್ಲಿ ಯಶಸ್ವಿಯಾದರು. ಚೆಂಡು ನೆರವಾಗಿ ದೀಪ್ತಿ ಶರ್ಮಾ ಬಳಿ ಹೋಯಿತು. ದೀಪ್ತಿ ತಕ್ಷಣವೇ ಶಾರ್ಟ್ ಕವರ್‌ನತ್ತ ಓಡಿ ಚೆಂಡನ್ನು ಎತ್ತಿಕೊಂಡರು. ಇಲ್ಲಿ ಚಾಣಾಕ್ಯತನ ಮೆರೆದ ದೀಪ್ತಿ, ಸೋಫಿ ಡಿವೈನ್ ತೊರೆದ ಅಸಡ್ಡೆ ತನದ ಲಾಭ ಪಡೆದರು. ದೀಪ್ತಿ ತಕ್ಷಣವೇ ಚೆಂಡನ್ನು ತೆಗೆದುಕೊಂಡು ವಿಕೆಟ್ ಕೀಪರ್ ಕಡೆಗೆ ಎಸೆದರು. ವಿಕೆಟ್ ಕೀಪರ್ ತಕ್ಷಣವೇ ಸ್ಟಂಪ್ ಔಟ್ ಮಾಡಿದರು. ಇತ್ತ ದಿವ್ಯ ನಿರ್ಲಕ್ಷ್ಯ ತೊರಿದ ಸೋಫಿ ಡಿವೈನ್ ಕ್ರಿಸ್ ಮುಟ್ಟುವಲ್ಲಿ ತಡ ಮಾಡಿದರು. ಹೀಗಾಗಿ ಸೋಫಿ ರನ್ ಔಟ್ ಆಗಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 24, 2024 09:47 PM