ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮತ್ತೊಮ್ಮೆ ಒಗಟಿನಲ್ಲಿ ಮಾತಾಡಿದ ಬಿಜೆಪಿ ಶಾಸಕ ಸೋಮಶೇಖರ್
ಸಿಪಿ ಯೋಗೇಶ್ವರ್ ಕಳೆದ 10-12 ವರ್ಷಗಳಿಂದ ಬಿಜೆಪಿಯಲ್ಲಿದ್ದರು ಮತ್ತು ಪಕ್ಷ ಅಧಿಕಾರಕ್ಕೆ ಬರಲು ಕಾರಣೀಕರ್ತರಾಗಿದ್ದರು, ಅದರೆ ಬಿಜೆಪಿ ಅವರನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ಕಾಂಗ್ರೆಸ್ಗೆ ವಾಪಸ್ಸು ಹೋಗಿದ್ದಾರೆ ಎಂದು ಸೋಮಶೇಖರ್ ಹೇಳಿದರು.
ಬೆಂಗಳೂರು: ತಮ್ಮ ಹಿಂದಿನ ಪಕ್ಷ ಕಾಂಗ್ರೆಸ್ ನತ್ತ ಸಂಪೂರ್ಣವಾಗಿ ವಾಲಿರುವ ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಯಾವಾಗ ಕಾಂಗ್ರೆಸ್ ಗೆ ಹೋಗ್ತೀರಿ ಅಂತ ಕೇಳಿದರೆ ಒಗಟಿನಂತೆ ಮಾತಾಡುತ್ತಾರೆ. ಕೆಲ ತಿಂಗಳುಗಳಿಂದ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹರಡಿದೆ. ಇವತ್ತು ನಗರದಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು ಮತ್ತೊಮ್ಮೆ ಒಗಟಿನಲ್ಲಿ ಮಾತಾಡಿ, ತನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಮತ್ತು ಡಿಸಿಎಂರನ್ನು ಭೇಟಿಯಾಗುತ್ತಲೇ ಇರುತ್ತೇನೆ, ಬೇರೆಯವರು ರಾತ್ರಿಹೊತ್ತು ಭೇಟಿಯಾಗುತ್ತಾರೆ, ತಾನು ರಾಜಾರೋಷವಾಗಿ ಹಗಲಲ್ಲೇ ಭೇಟಿಯಾಗ್ತೀನಿ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಿಕೆ ಸುರೇಶ್ ಮನೆಯಲ್ಲಿ ಬಿಜೆಪಿ ಶಾಸಕರು-ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್!
Latest Videos