IND vs SA, ICC World Cup: ವಿರಾಟ್ ಕೊಹ್ಲಿ ಮುಖವಾಡ ಧರಿಸಿ ಸ್ಟೇಡಿಯಂಗೆ ಬರುತ್ತಿದ್ದಾರೆ ಫ್ಯಾನ್ಸ್: ವಿಡಿಯೋ

|

Updated on: Nov 05, 2023 | 12:37 PM

Virat Kohli Birthday: ವಿರಾಟ್ ಕೊಹ್ಲಿಗೆ ಜನ್ಮದಿನದ ಪ್ರಯುಕ್ತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದರ ಜೊತೆಗೆ ಇಂದು ಕೋಲ್ಕತ್ತಾದಲ್ಲಿ ಭಾರತ-ದಕ್ಷಿಣ ಆಫ್ರಿಕಾ ವಿಶ್ವಕಪ್ ಪಂದ್ಯ ಕೂಡ ನಡೆಯಲಿದ್ದು, ಈಡನ್ ಗಾರ್ಡನ್ಸ್​ಗೆ ಕೊಹ್ಲಿಯ ಮುಖವಾಡ ಧರಿಸಿ ಫ್ಯಾನ್ಸ್ ಬರುತ್ತಿದ್ದಾರೆ.

ಸಮಕಾಲೀನ ಕ್ರಿಕೆಟ್‌ ಜಗತ್ತಿನ ಅತ್ಯಂತ ಯಶಸ್ವಿ ಬ್ಯಾಟರ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಇಂದು 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಸಾಕಷ್ಟು ವೈಫಲ್ಯಗಳನ್ನು ಎದುರಿಸಿ ಇಂದು ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುವ ಕಿಂಗ್ ಕೊಹ್ಲಿಗೆ ಜನ್ಮದಿನದ ಪ್ರಯುಕ್ತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದರ ಜೊತೆಗೆ ಇಂದು ಕೋಲ್ಕತ್ತಾದಲ್ಲಿ ಭಾರತ-ದಕ್ಷಿಣ ಆಫ್ರಿಕಾ ವಿಶ್ವಕಪ್ ಪಂದ್ಯ ಕೂಡ ನಡೆಯಲಿದ್ದು, ಈಡನ್ ಗಾರ್ಡನ್ಸ್​ಗೆ ಕೊಹ್ಲಿಯ ಮುಖವಾಡ ಧರಿಸಿ ಫ್ಯಾನ್ಸ್ ಬರುತ್ತಿದ್ದಾರೆ. ಸ್ಟೇಡಿಯಂನ ಹೊರಗಡೆ ಕೊಹ್ಲಿಯ ನಾಮಜಪ ಜೋರಾಗಿ ಕೇಳಿಬರುತ್ತಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 05, 2023 12:36 PM