ಯಲಹಂಕದಲ್ಲಿ ಕಡಲೆಕಾಯಿ ಪರಿಷೆ, ವಿವಿಧ ಬಗೆಯ ಕಡಲೆಕಾಯಿ ಸವಿದು ಎಂಜಾಯ್ ಮಾಡಿದ ಜನ

ಯಲಹಂಕದಲ್ಲಿ ಕಡಲೆಕಾಯಿ ಪರಿಷೆ, ವಿವಿಧ ಬಗೆಯ ಕಡಲೆಕಾಯಿ ಸವಿದು ಎಂಜಾಯ್ ಮಾಡಿದ ಜನ

Poornima Agali Nagaraj
| Updated By: ಆಯೇಷಾ ಬಾನು

Updated on: Nov 05, 2023 | 1:53 PM

ಯಲಹಂಕದ ವೆಂಕಟಚಲ ಏರಿಯಾದ ವಾರ್ಡ್ ನಂಬರ್ ಒಂದರಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಿದೆ. ಈ ಪರಷೆ ಎರಡು ದಿನ ನಡೆಯಲಿದ್ದು, ಗೌರಿ ಬಿದನೂರು, ದೇವನಳ್ಳಿ, ಜಾವಗಲ್, ಚಿಕ್ಕಬಳ್ಳಾಪುರ, ದೇವನೂರು, ದೊಡ್ಡಬಳ್ಳಾಪುರ, ಬೀದರ್ , ಆಂಧ್ರ, ತುಮಕೂರು, ಕರ್ನೂಲ್, ತುಮಕೂರು ಸೇರಿದಂತೆ ವಿವಿಧ ಭಾಗಗಳಿಂದ ರೈತರು ಆಗಮಿಸಿ ವಿವಿಧ ಬಗೆಯ ಕಡಲೆಕಾಯಿಯನ್ನು ಸೇಲ್ ಮಾಡ್ತಿದ್ದಾರೆ.

ಬೆಂಗಳೂರು, ನ.05: ನಿನ್ನೆಯಿಂದ (ನ.04) ಯಲಹಂಕದಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಿದೆ. ಯಲಹಂಕದ ವೆಂಕಟಚಲ ಏರಿಯಾದ ವಾರ್ಡ್ ನಂಬರ್ ಒಂದರಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಿದೆ. 10 ವರ್ಷಗಳಿಂದ ಯಲಹಂಕದಲ್ಲಿ ಕಡಲೆಕಾಯಿ ಪರಷೆ ನಡೆದುಕೊಂಡು ಬರುತ್ತಿದ್ದು, ಇಂದಿಗೆ 11 ವರ್ಷಕ್ಕೆ ಕಾಲಿಟ್ಟಿದೆ. ಈ ಬಾರಿ ಅದ್ದೂರಿಯಾಗಿ ಕಡಲೆಕಾಯಿ ಪರಿಷೆ ನಡೆಯುತ್ತಿದೆ.

ಪರಿಷೆಯಲ್ಲಿ ಈ ಬಾರಿ 200ಕ್ಕೂ ಅಧಿಕ ಕಡಲೆಕಾಯಿ ಸ್ಟಾಲ್ ಗಳನ್ನ ಹಾಕಲಾಗಿದೆ. ಈ ಪರಷೆ ಎರಡು ದಿನ ನಡೆಯಲಿದ್ದು, ಗೌರಿ ಬಿದನೂರು, ದೇವನಳ್ಳಿ, ಜಾವಗಲ್, ಚಿಕ್ಕಬಳ್ಳಾಪುರ, ದೇವನೂರು, ದೊಡ್ಡಬಳ್ಳಾಪುರ, ಬೀದರ್ , ಆಂಧ್ರ, ತುಮಕೂರು, ಕರ್ನೂಲ್, ತುಮಕೂರು ಸೇರಿದಂತೆ ವಿವಿಧ ಭಾಗಗಳಿಂದ ರೈತರು ಆಗಮಿಸಿ ನಾಟಿ ಕಡಲೇಕಾಯಿ, ಆಂಧ್ರ ಕಡಲೆಕಾಯಿ, ಫಾರಮ್ ಕಡಲೇ ಕಾಯಿ, ಸಾಂಬ್ರಾಟ್ ಕಡಲೆಕಾಯಿ, ಗಡಂಗ್ ಕಡಲೆಕಾಯಿ, ಬೊಂಡಾ ಕಡಲೆಕಾಯಿ, ಸಂಬ್ರಾಟಿ ಕಡಲೆಕಾಯಿ, ಕೆಎಲ್ ಕಡಲೆಕಾಯಿ ಸೇರಿದಂತೆ ವಿವಿಧ ಬಗೆಯ ಕಡಲೆಕಾಯಿಗಳನ್ನು ಸೇಲ್ ಮಾಡ್ತಾರೆ. ಈ ಪರಿಷೆಗೆ 50 ಸಾವಿರಕ್ಕೂ ಹೆಚ್ಚು ಜನರು ಬರುವ ಸಾಧ್ಯಾತೆಗಳಿದ್ದು, ಯಾವುದೇ ಸಮಸ್ಯೆಗಳಾಗದಂತೆ ಪೋಲಿಸರನ್ನ ನಿಯೋಜನೆ ಮಾಡಲಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಕಡಲೆಕಾಯಿ ಬೆಲೆ ತುಸು ಜಾಸ್ತಿಯಾಗಿದೆ.‌ ಮಳೆಯಿಲ್ಲದ ಕಾರಣ ಈ ಬಾರಿ ಕಡಲೆ ಬೆಲೆ 80 ರಿಂದ 150 ರೂಪಾಯಿವರೆಗೂ ಜಾಸ್ತಿಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ