IND vs NZ: ಟಿ20 ಸರಣಿ ಟ್ರೋಫಿಯ ವಿಶೇಷತೆ ಏನು ಗೊತ್ತಾ? ವಿಡಿಯೋ ನೋಡಿ

Updated on: Jan 21, 2026 | 10:18 PM

India vs New Zealand T20 Series Trophy: ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಟ್ರೋಫಿ ವಿಶೇಷವಾಗಿದೆ. ಇದನ್ನು ಮರ ಮತ್ತು ಚರ್ಮದಿಂದ, ಅದರಲ್ಲೂ ಮುಖ್ಯವಾಗಿ ಬಳಸಲಾಗದ ಕ್ರಿಕೆಟ್ ಬ್ಯಾಟ್‌ಗಳು ಹಾಗೂ ಚರ್ಮದ ಚೆಂಡುಗಳನ್ನು ಮರುಬಳಕೆ ಮಾಡಿ ತಯಾರಿಸಲಾಗಿದೆ. ಲೋಹದ ಟ್ರೋಫಿಗಳ ಬದಲಿಗೆ ಪರಿಸರ ಸ್ನೇಹಿ ವಿನ್ಯಾಸವನ್ನು ಅಳವಡಿಸಿಕೊಂಡಿರುವುದು ಇದರ ವಿಶೇಷ. ಈ ವಿಶಿಷ್ಟ ಟ್ರೋಫಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರಣಿಯ ಪ್ರಮುಖ ಆಕರ್ಷಣೆಯಾಗಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ದಾಖಲೆಯ 239 ರನ್ ಕಲೆಹಾಕಿದೆ. ಇದು ಪಂದ್ಯದ ವಿಚಾರವಾದರೆ, ಇನ್ನು ಈ ಸರಣಿ ವಿಜೇತರಿಗೆ ನೀಡಲಿರುವ ಟ್ರೋಫಿ ತನ್ನ ವೈಶಿಷ್ಟ್ಯಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಸರಣಿಗಾಗಿ ನಿರ್ಮಿಸಿರುವ ಟ್ರೋಫಿ ಕಂದು ಮತ್ತು ಕೆಂಪು ಬಣ್ಣ ಮಿಶ್ರಿತವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಟ್ರೋಫಿಗಳನ್ನು ಲೋಹದಿಂದ ತಯಾರಿಸಲಾಗುತ್ತದೆ. ಆದಾಗ್ಯೂ, ಈ ಸರಣಿಗಾಗಿ ನಿರ್ಮಿಸಿರುವ ಈ ಟ್ರೋಫಿಯನ್ನು ವಿಶೇಷವಾಗಿ ಮರ ಮತ್ತು ಚರ್ಮವನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ. ಈ ಟ್ರೋಫಿಯ ಬಗ್ಗೆ ಮಾಹಿತಿ ನೀಡಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದ್ದು, ‘ಈ ಟ್ರೋಫಿಯನ್ನು ಈಗಾಗಲೇ ಬಳಸಿರುವ ಮತ್ತು ಮತ್ತೆ ಬಳಸಲು ಸಾಧ್ಯವಿಲ್ಲದ ಬ್ಯಾಟ್‌ಗಳು ಮತ್ತು ಚರ್ಮದ ಚೆಂಡುಗಳನ್ನು ಮರುಬಳಕೆ ಮಾಡುವ ಮೂಲಕ ತಯಾರಿಸಲಾಗಿದೆ’.