AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಸಾವಿನ ಮನೆಯಲ್ಲಿ ಬಿಳಿ ವಸ್ತ್ರವನ್ನು ಯಾಕೆ ಧರಿಸುವದು?

Daily Devotional: ಸಾವಿನ ಮನೆಯಲ್ಲಿ ಬಿಳಿ ವಸ್ತ್ರವನ್ನು ಯಾಕೆ ಧರಿಸುವದು?

ಅಕ್ಷಯ್​ ಪಲ್ಲಮಜಲು​​
|

Updated on: Jan 22, 2026 | 6:36 AM

Share

ಹಿಂದೂ ಸಂಪ್ರದಾಯದಲ್ಲಿ, ಮರಣದ ಮನೆಯಲ್ಲಿ ಬಿಳಿ ವಸ್ತ್ರ ಧರಿಸುವುದು ಶಾಂತಿ, ಶುದ್ಧತೆ ಮತ್ತು ಮೌನದ ಸಂಕೇತ. ಇದು ಮೃತರ ಆತ್ಮಕ್ಕೆ ಶಾಂತಿ ಹಾಗೂ ಮೋಕ್ಷ ಒದಗಿಸಲು ಸಹಕಾರಿ. ಬಿಳಿಯ ಬಣ್ಣವು ಶೋಕದಲ್ಲಿ ಕುಟುಂಬದವರಿಗೆ ಸಮಾಧಾನವನ್ನು ತರಲು ಮತ್ತು ವಾತಾವರಣವನ್ನು ಶುದ್ಧವಾಗಿಡಲು ಸಹಕಾರಿಯಾಗುತ್ತದೆ ಎಂದು ನಂಬಲಾಗಿದೆ.

ಮರಣದ ಹೊಂದಿದ ನಂತರ ಹಿಂದೂ ಸಂಪ್ರದಾಯ ಬಿಳಿ ವಸ್ತ್ರ ಧರಿಸುವುದು ರೂಢಿ ಇಂದಿಗೂ ಇದೆ. ಬಿಳಿಯ ಬಣ್ಣವು ಶಾಂತಿ, ಶುದ್ಧತೆ, ಮೌನ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಭಗವದ್ಗೀತೆಯ ಪ್ರಕಾರ ಜನನ-ಮರಣಗಳು ಜೀವನದ ಸಹಜ ಭಾಗ. ಅಂತಹ ಸಂದರ್ಭಗಳಲ್ಲಿ ಬಿಳಿ ವಸ್ತ್ರಗಳನ್ನು ಧರಿಸಿ, ಒಡವೆಗಳನ್ನು ತ್ಯಜಿಸಿ, ಮೌನ ಪಾಲಿಸುವುದು ಆತ್ಮಕ್ಕೆ ಶಾಂತಿ ನೀಡುತ್ತದೆ. ಇದು ಮೃತರ ಆತ್ಮಕ್ಕೆ ಮೋಕ್ಷವನ್ನು ಕರುಣಿಸಲು ಹಾಗೂ ಕುಟುಂಬದಲ್ಲಿ ಶಾಂತಿಯನ್ನು ನೆಲೆಸಲು ಸಹಾಯ ಮಾಡುತ್ತದೆ. ಬಿಳಿ ವಸ್ತ್ರವು ವಾತಾವರಣವನ್ನು ಶುದ್ಧವಾಗಿರಿಸಲು ಸಹಕಾರಿಯಾಗುತ್ತದೆ ಎಂದು ನಂಬಲಾಗಿದೆ. ಪ್ರತಿಯೊಬ್ಬರೂ ಸಾವಿನ ಮನೆಗೆ ಹೋಗುವಾಗ ಸಾಧ್ಯವಾದಷ್ಟು ಬಿಳಿ ವಸ್ತ್ರ, ಇಲ್ಲವಾದರೆ ಕನಿಷ್ಠ ಬಿಳಿ ಟವಲ್ ಧರಿಸುವುದರಿಂದ ಮೃತರ ಆತ್ಮಕ್ಕೆ ಶಾಂತಿ ಹಾಗೂ ಬದುಕಿರುವವರಿಗೆ ಶುಭವಾಗುತ್ತದೆ. ಒಡವೆಗಳನ್ನು ಹಾಕಿಕೊಂಡು, ವಿಚಿತ್ರವಾದ ಅಥವಾ ಆಡಂಬರದ ಬಟ್ಟೆಗಳನ್ನು ಧರಿಸಿಕೊಂಡು ಹೋಗುವುದಕ್ಕಿಂತ ಬಿಳಿಯ ವಸ್ತ್ರವನ್ನು ಧರಿಸಿ ಸ್ವಲ್ಪ ಹೊತ್ತು ಮೌನವನ್ನು ಪಾಲಿಸಿದಾಗ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದು ಮೃತರ ಆತ್ಮಕ್ಕೆ ಮೋಕ್ಷವನ್ನು ಕರುಣಿಸಲು ಸಹಾಯಕವಾಗುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ, ಇದು ಕುಟುಂಬದಲ್ಲಿ ಶಾಂತಿಯನ್ನು ನೆಲೆಸಲು ಸಹಕಾರಿಯಾಗುತ್ತದೆ. ಹಿಂದೂ ಸಮಾಜದಲ್ಲಿ ಮತ್ತು ಹಿಂದೂ ಧರ್ಮದಲ್ಲಿ ಜ್ಞಾನ ಮತ್ತು ಸದ್ಭಾವನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಬಿಳಿ ಬಣ್ಣವು ಇದೇ ಜ್ಞಾನ ಮತ್ತು ಸದ್ಭಾವನೆಗೆ ಪ್ರತೀಕವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ