Video: ಫ್ರಾನ್ಸ್​ಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಭಾರತೀಯ ಸಮುದಾಯ ಸ್ವಾಗತಿಸಿದ್ದು ಹೀಗೆ

Updated on: Feb 11, 2025 | 10:18 AM

ಫ್ರಾನ್ಸ್​ನಲ್ಲಿ ಇಂದು ನಡೆಯಲಿರುವ ಎಐ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ತೆರಳಿದ್ದಾರೆ. ಅವರು ಫ್ರಾನ್ಸ್​ಗೆ ಬಮದಿಳಿಯುತ್ತಿದ್ದಂತೆ ಭಾರತೀಯ ಮೂಲದವರು ಅವರನ್ನು ವಿಶಿಷ್ಟವಾಗಿ ಬರಮಾಡಿಕೊಂಡರು. ಮುನ್ನಾ ದಿನ ರಾತ್ರಿಯ ಔತಣಕೂಟದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಆತ್ಮೀಯವಾಗಿ ಆಲಿಂಗಿಸಿ ಸ್ವಾಗತಿಸಿದರು.ಎರಡು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಮೋದಿ ಪ್ಯಾರಿಸ್​ಗೆ ಆಗಮಿಸಿದರು. ಫ್ರಾನ್ಸ್ ಭೇಟಿಯ ಬಳಿಕ ಮೋದಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಫ್ರಾನ್ಸ್​ನಲ್ಲಿ ಇಂದು ನಡೆಯಲಿರುವ ಎಐ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ತೆರಳಿದ್ದಾರೆ. ಅವರು ಫ್ರಾನ್ಸ್​ಗೆ ಬಮದಿಳಿಯುತ್ತಿದ್ದಂತೆ ಭಾರತೀಯ ಮೂಲದವರು ಅವರನ್ನು ವಿಶಿಷ್ಟವಾಗಿ ಬರಮಾಡಿಕೊಂಡರು. ಮುನ್ನಾ ದಿನ ರಾತ್ರಿಯ ಔತಣಕೂಟದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಆತ್ಮೀಯವಾಗಿ ಆಲಿಂಗಿಸಿ ಸ್ವಾಗತಿಸಿದರು.

ಪ್ಯಾರೀಸ್ ನಲ್ಲಿ ಆತ್ಮೀಯ ಸ್ನೇಹಿತ, ಅಧ್ಯಕ್ಷ ಮ್ಯಾಕ್ರೋನ್ ಅವರನ್ನು ಭೇಟಿ ಮಾಡಿರುವುದು ಅತೀವ ಆನಂದ ತಂದಿದೆ ಎಂದು ಮೋದಿ ಎಕ್ಸ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ. ಬರೆದಿದ್ದಾರೆ. ಎರಡು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಮೋದಿ ಪ್ಯಾರಿಸ್​ಗೆ ಆಗಮಿಸಿದರು. ಫ್ರಾನ್ಸ್ ಭೇಟಿಯ ಬಳಿಕ ಮೋದಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಮೂರು ದಿನಗಳ ಫ್ರಾನ್ಸ್ ಭೇಟಿಯ ವೇಳೆ ಎಐ ಆ್ಯಕ್ಷನ್ ಸಮಿಟ್ ನ ಸಹ ಅಧ್ಯಕ್ಷತೆಯನ್ನು ಮ್ಯಾಕ್ರೋನ್ ಜತೆ ವಹಿಸಲಿದ್ದಾರೆ. ಜತೆಗೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸುವರು ಹಾಗೂ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ