New look of Indian Railways: ಪ್ರಧಾನಿ ನರೇಂದ್ರ ಮೋದಿಯ 9 ವರ್ಷ ಆಡಳಿತದಲ್ಲಿ ಭಾರತೀಯ ರೇಲ್ವೇಸ್ ಸಾಧಿಸಿರುವ ಪ್ರಗತಿ ಅಷ್ಟಿಷ್ಟಲ್ಲ!

|

Updated on: Jun 05, 2023 | 12:18 PM

ಪ್ರಧಾನಿ ಮೋದಿಯವರು ಕಳೆದ 9 ವರ್ಷಗಳಲ್ಲಿ ರೇಲ್ವೇ ಬಜೆಟ್ ಅನ್ನು ಶೇಕಡ 481 ರಷ್ಟು ಹೆಚ್ಚಿಸಿ, ಸಾರ್ವಜನಿಕರಿಗೆ ಹಲವಾರು ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ.

ಬೆಂಗಳೂರು: ರೈಲು ಭಾರತೀಯರ ಬದುಕಿನ ಬಹುದೊಡ್ಡ ಭಾಗ ಮತ್ತು ಅತ್ಯಂತ ಪ್ರಮುಖ ಹಾಗೂ ಜನಪ್ರಿಯ ಸಾರಿಗೆ ಸಾಧನ (popular transport mode). ದೇಶದಲ್ಲಿ ದಶಕಗಳಿಂದ ರೈಲು ಸಂಚಾರ ವ್ಯವಸ್ಥೆ ಜಾರಿಯಲ್ಲಿದೆಯಾದರೂ ಆದು ಕಳೆದ ದಶಕಕದಲ್ಲಿ ಒಂದು ಹೊಸರೂಪ ಪಡೆದುಕೊಂಡಿದೆ ಎಂದರೆ ಉತ್ರೇಕ್ಷ ಅನಿಸದು. ನಿಮಗೆ ನೆನಪಿರಬಹುದು, 2014 ಕ್ಕಿಂತ ಮೊದಲು ರೇಲ್ವೇ ಬಜೆಟ್ (Railway Budget) ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆ ಪದ್ಧತಿಯನ್ನು ತೆಗೆದು ಹಾಕಲಾಯಿತು. ಪ್ರಧಾನಿ ಮೋದಿಯವರು ಕಳೆದ 9 ವರ್ಷಗಳಲ್ಲಿ ರೇಲ್ವೇ ಬಜೆಟ್ ಅನ್ನು ಶೇಕಡ 481 ರಷ್ಟು ಹೆಚ್ಚಿಸಿ, ಸಾರ್ವಜನಿಕರಿಗೆ ಹಲವಾರು ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ. ಮೋದಿಯವರ ಆಡಳಿತಾವಧಿಯಲ್ಲಿ 37,011 ಕಿಮೀ ಉದ್ದ ರೈಲು ಮಾರ್ಗದ ವಿದ್ಯುದ್ದೀಕರಣ ಆಗಿದ್ದು ದೇಶವ್ಯಾಪಿ ಶೇಕಡ 90 ರಷ್ಟು ವಿದ್ಯುದ್ದೀಕರಣ ಪೂರ್ತಿಗೊಂಡಂತಾಗಿದೆ. ಮೊದಲೆಲ್ಲ ನೀವು ರೈಲು ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಲು ರೇಲ್ವೇ ಸ್ಟೇಶನ್ ಬಳಿ ಗಂಟೆಗಟ್ಟಲೆ ಉದ್ದನೆಯ ಕ್ಯೂನಲ್ಲಿ ನಿಂತುಕೊಳ್ಳಬೇಕಿತ್ತು. ಆದರೆ ಈಗ ನಿಮ್ಮ ಮೊಬೈಲ್ ನಲ್ಲಿ ಮನೆಯಲ್ಲಿ ಹರಟುತ್ತಾ, ಕಾಫಿ ಹೀರುತ್ತಾ ಇಲ್ಲವೇ ಆಫೀಸಲ್ಲಿ ಕೆಲಸ ಮಾಡುತ್ತಲೇ ಟಿಕೆಟ್ ಬುಕ್ ಮಾಡಬಹುದು. ಇದು ಸಾಧ್ಯವಾಗುತ್ತಿರೋದು ಪ್ರಧಾನಿ ಮೋದಿಯವರ ಡಿಜಿಟಲೀಕರಣ ಮಂತ್ರದಿಂದ.  ಪ್ರಧಾನಿ ಮೋದಿ ಹೆಚ್ಚು ಕಡಿಮೆ ಪ್ರತಿ ತಿಂಗಳು ಒಂದು ಹೊಸ ವಂದೇ ಭಾರತ್ ಟ್ರೈನಿಗೆ ಚಾಲನೆ ನೀಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ