World Yoga Day 2023: ಯೋಗಯುಕ್ತ ದೇಹ, ರೋಗ ಮುಕ್ತ ದೇಶ

|

Updated on: Jun 21, 2023 | 8:23 AM

ವಿಧಾನಸೌಧ ಮುಂಭಾಗ ಆಯುಷ್ ಇಲಾಖೆ ವತಿಯಿಂದ ಇಂದು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ ಮಾಡಲಾಯ್ತು.

ಬೆಂಗಳೂರು: ಬದಲಾದ ಜೀವನ ಶೈಲಿಯಿಂದ ಜನರಲ್ಲಿ ಆರೋಗ್ಯದ ಸಮಸ್ಯೆಗಳು ಸಾಮಾನ್ಯವಾಗಿದೆ. ಹೀಗಾಗಿ ಆರೋಗ್ಯವನ್ನು ಉತ್ತಮವಾಗಿಸಲು ಯೋಗ ಅತಿ ಮುಖ್ಯ. ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್‌ 21 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತೆ(International Yoga Day 2023). ಇಂದು 9ನೇ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  ವಿಧಾನಸೌಧ ಮುಂಭಾಗ ಆಯುಷ್ ಇಲಾಖೆ ವತಿಯಿಂದ ಇಂದು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ ಮಾಡಲಾಯ್ತು. ವಿವಿಧ ಸಂಘಸಂಸ್ಥೆಗಳ ಸದಸ್ಯರು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು. ಈ ವೇಳೆ ಯೋಗ ಬಗ್ಗೆ ಮಹತ್ವದ ಸಂದೇಶ ನೀಡಿದರು.

Follow us on