ತಾಯ್ನಾಡಿನಲ್ಲಿ ಯುದ್ಧದ ಕಾರ್ಮೋಡ: ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ

Edited By:

Updated on: Mar 02, 2026 | 9:11 AM

ದಾವಣಗೆರೆಯ ದುಗ್ಗಮ್ಮ ಜಾತ್ರೆ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್‌ನ ಮಿರ್ಜಾ ಪೈಲ್ವಾನ್ ಪ್ರೇಕ್ಷಕರ ಮನ ಗೆದ್ದರು. ತಮ್ಮ ದೇಶದ ಯುದ್ಧದ ನಡುವೆಯೂ, ದಾವಣಗೆರೆಯ ಮಣ್ಣಿನ ಅಖಾಡದಲ್ಲಿ ಮಹಾರಾಷ್ಟ್ರದ ರವಿರಾಜ್ ವಿರುದ್ಧ ಸಮಬಲದ ಹೋರಾಟ ನಡೆಸಿ ಮೆಚ್ಚುಗೆ ಗಳಿಸಿದರು. ಭಾರತೀಯರ ಪ್ರೀತಿ ಮತ್ತು ಅದ್ಭುತ ಕ್ರೀಡಾಭಿಮಾನವನ್ನು ಮಿರ್ಜಾ ಹಾಡಿ ಹೊಗಳಿದರು, ಇದು ಅವರಿಗೆ ಧೈರ್ಯ ನೀಡಿದೆ ಎಂದು ಹೇಳಿದರು.

ದಾವಣಗೆರೆ, ಮಾ.2: ಇಲ್ಲಿನ ದೇವತೆ ದುಗ್ಗಮ್ಮನ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್‌ನ ಮಿರ್ಜಾ ಪೈಲ್ವಾನ್ ಪ್ರೇಕ್ಷಕರ ಮನ ಗೆದ್ದಿದ್ದಾರೆ. ತಮ್ಮ ತಾಯ್ನಾಡಿನಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದರೂ, ದಾವಣಗೆರೆಯ ಮಣ್ಣಿನ ಅಖಾಡದಲ್ಲಿ ಬೆವರಳಿಸಿದ ಮಿರ್ಜಾ, ಭಾರತೀಯರ ಪ್ರೀತಿ ಮತ್ತು ಕ್ರೀಡಾಭಿಮಾನವನ್ನು ಹಾಡಿ ಹೊಗಳಿದ್ದಾರೆ. ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಫೈನಲ್ ಪಂದ್ಯವು ಭಾರೀ ಕುತೂಹಲ ಮೂಡಿಸಿತ್ತು. ಮಹಾರಾಷ್ಟ್ರದ ಪುಣೆಯ ಖ್ಯಾತ ಕುಸ್ತಿಪಟು ರವಿರಾಜ್ ಹಾಗೂ ಇರಾನ್‌ನ ಮಿರ್ಜಾ ನಡುವೆ ನಡೆದ ಈ ಕಾಳಗದಲ್ಲಿ ಇಬ್ಬರೂ ಸಮಬಲದ ಪೈಪೋಟಿ ನೀಡಿದರು. ರಂಭದಿಂದಲೇ ಇಬ್ಬರೂ ಪಟುಗಳು ದಾಳಿ ಮತ್ತು ಪ್ರತಿದಾಳಿಗಳ ಮೂಲಕ ವಿರಾರು ಪ್ರೇಕ್ಷಕರನ್ನು ರಂಜಿಸಿದರು. ಅಂತಿಮವಾಗಿ ಪಂದ್ಯವು ಸಮಬಲದಲ್ಲಿ ಅಂತ್ಯಗೊಂಡಿತು. ಸ್ಪಷ್ಟ ಜಯಶಾಲಿ ಯಾರು ಎಂಬುದು ನಿರ್ಧಾರವಾಗದಿದ್ದರೂ, ಇಬ್ಬರ ಹೋರಾಟಕ್ಕೆ ಅಭಿಮಾನಿಗಳು ಮನಸೋತು ಚಪ್ಪಾಳೆ ತಟ್ಟಿದರು. “ನನ್ನ ದೇಶದಲ್ಲಿ ಪರಿಸ್ಥಿತಿ ಸರಿಯಿಲ್ಲದಿದ್ದರೂ, ಇಲ್ಲಿನ ಜನರ ಪ್ರೀತಿ ನನಗೆ ಧೈರ್ಯ ನೀಡಿದೆ. ಹಿಂದುಸ್ತಾನದ ಕ್ರೀಡಾಭಿಮಾನ ಮತ್ತು ಇಲ್ಲಿನ ಮಣ್ಣಿನ ಸಂಸ್ಕೃತಿ ಅದ್ಭುತ” ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 02, 2026 09:11 AM
Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More