ಚನ್ನಪಟ್ಟಣ ಬಳಿ ಹಂಪಿ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೆ ಸಂಚು!
ಹಳಿಯ ಮೇಲೆ ಕಬ್ಬಿಣದ ರಾಡ್ ಇಟ್ಟು ರೈಲು ಹಳಿ ತಪ್ಪಿಸುವ ದುಷ್ಕರ್ಮಿಗಳ ಯತ್ನ ವಿಫಲವಾಗಿದೆ. ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಬಳಿ ಘಟನೆ ನಡೆದಿದೆ. ಹಳಿಯ ಮೇಲೆ ಇಡಲಾಗಿದ್ದ ಕಬ್ಬಿಣದ ರಾಡ್ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ಗೆ ಬಡಿದಿದೆ. ಪರಿಣಾಮ ರೈಲು ಅರ್ಧದಲ್ಲೇ ನಿಂತಿದೆ.
ರಾಮನಗರ, ನವೆಂಬರ್ 23: ಹಳಿ ಮೇಲೆ ಕಬ್ಬಿಣದ ರಾಡ್ ಇಟ್ಟು ರೈಲು ಹಳಿ ತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿದ್ದು, ಅದೃಷ್ಣವಶಾತ್ ಉದ್ದೇಶ ವಿಫಲವಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಬಳಿ ನಡೆದಿದೆ. ಹಳಿಯ ಮೇಲೆ ಇಡಲಾಗಿದ್ದ ಕಬ್ಬಿಣದ ರಾಡ್ ಇಂಜಿನ್ಗೆ ಬಡಿದಿದ್ದು, ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲು ಅರ್ಧದಲ್ಲೇ ನಿಂತಿದೆ. ಬಳಿಕ ಬದಲಿ ಇಂಜಿನ್ ವ್ಯವಸ್ಥೆ ಮಾಡಲಾಗಿದ್ದು, ರೈಲು ಬೆಂಗಳೂರು ಕಡೆ ತೆರಳಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 23, 2025 06:52 AM