Chandrayaan-3 ಚಂದ್ರಯಾನ-3 ಮಿಷನ್ ಕುರಿತು ವಿವರಗಳನ್ನು ಹಂಚಿಕೊಂಡ ಬೆಂಗಳೂರು ಇಸ್ರೋ ವಿಜ್ಞಾನಿ

|

Updated on: Jul 14, 2023 | 4:08 PM

ಉಪಗ್ರಹ ಲಾಂಚ್ ವೆಹಿಕಲ್, ಭೂಮಿಯ ಕಕ್ಷೆ, ಚಂದ್ರನ ಕಕ್ಷೆ, ಗುರುತ್ವಾಕರ್ಷಣ ಶಕ್ತಿ ಮೊದಲಾದ ಪದಗಳು ಜನಸಾಮಾನ್ಯನ ಊಹೆಗೆ ನಿಲುಕಲಾರವು.

ಬೆಂಗಳೂರು: ಭಾರತದ ಬಾಹ್ಯಾಕಾಶ ವಿಜ್ಞಾನ ಇತಿಹಾಸದಲ್ಲಿ ಇವತ್ತು ಮತ್ತೊಂದು ಮೈಲಿಗಲ್ಲು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೆಂದ್ರದಿಂದ (Satish Dhawan Space Centre) ಚಂದ್ರಯಾನ-3 (Chandrayaan-3) ಯಶಸ್ವೀಯಾಗಿ ಉಡಾವಣೆಗೊಂಡಿದೆ. ಚಂದ್ರಯಾನ-2 ಕೂದಲೆಳೆಯ ಅಂತರದಿಂದ ತನ್ನ ಮಿಷನ್ ನಲ್ಲಿ ವಿಫಲವಾದಾಗ ಧೃತಿಗೆಡೆದ ಇಸ್ರೋ ವಿಜ್ಞಾನಿಗಳು ಛಲಬಿಡದ ತ್ರಿವಿಕ್ರಮನ ಹಾಗೆ ಚಂದ್ರಯಾನ-3 ಅಣಿಗೊಳಿಸಿ ಚಂದ್ರನೆಡೆ ಉಡಾಯಿಸಿದ್ದಾರೆ. ಎಲ್ಲ ಭಾರತೀಯರಿಗೆ ಇದು ಹೆಮ್ಮೆಯ ದಿನ. ಬಾಹ್ಯಾಕಾಶ ವಿಜ್ಞಾನ (rocket science) ಸುಲಭಕ್ಕೆ ಅರ್ಥವಾಗುವಂಥದಲ್ಲ. ಉಪಗ್ರಹ ಲಾಂಚ್ ವೆಹಿಕಲ್, ಭೂಮಿಯ ಕಕ್ಷೆ, ಚಂದ್ರನ ಕಕ್ಷೆ, ಗುರುತ್ವಾಕರ್ಷಣ ಶಕ್ತಿ ಮೊದಲಾದ ಪದಗಳು ಜನಸಾಮಾನ್ಯನ ಊಹೆಗೆ ನಿಲುಕಲಾರವು. ಹಾಗಾಗೇ ಚಂದ್ರಯಾನ-3 ಮಿಷನ್ ಬಗ್ಗೆ ಸರಳವಾದ ಭಾಷೆಯಲ್ಲಿ ತಿಳಿಯಲು ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಇಸ್ರೋ ವಿಜ್ಞಾನಿ ಆನಂದ್ ಅವರನ್ನು ಮಾತಾಡಿಸಿದ್ದಾರೆ. ಚಂದ್ರಯಾನ-3, ಉಡಾವಣೆ ಮತ್ತು ಇತರ ಹಲವು ಸಂಗತಿಗಳನ್ನು ಅವರು ಅರ್ಥವಾಗುವಂತೆ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ