ಇಸ್ರೋದ ಬಾಹುಬಲಿ CMS-03 ಉಪಗ್ರಹ ಯಶಸ್ವಿ ಉಡಾವಣೆ, ಭಾರತೀಯ ಸೇನೆಗೆ ಸೇವೆ ಒದಗಿಸುವ ರಾಕೆಟ್

Updated on: Nov 02, 2025 | 7:28 PM

ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಒಂದು ಮೈಲಿಗಲ್ಲಾಗಿ, ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಕೇಂದ್ರ (ಇಸ್ರೋ - ISRO) (Indian Space Research Organisation) ಭಾನುವಾರ ಸಂಜೆ 5:26 ಕ್ಕೆ 'ಬಾಹುಬಲಿ'ಯನ್ನು (Baahubali) ಯಶಸ್ವಿಯಾಗಿ ನಭಕ್ಕೆ ಹಾರಿಸಿದೆ. ಭಾರತೀಯ ರಾಕೆಟ್‌ನಲ್ಲೇ (Indian rocket) ಅತ್ಯಂತ ಭಾರವಾದ ಉಪಗ್ರಹ (heaviest satellite) ಬಾಹುಬಲಿಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿತು.

ಶ್ರೀಹರಿಕೋಟಾ (ಆಂಧ್ರ ಪ್ರದೇಶ(, (ನವೆಂಬರ್ 02): ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಒಂದು ಮೈಲಿಗಲ್ಲಾಗಿ, ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಕೇಂದ್ರ (ಇಸ್ರೋ – ISRO) (Indian Space Research Organisation) ಭಾನುವಾರ ಸಂಜೆ 5:26 ಕ್ಕೆ ‘ಬಾಹುಬಲಿ’ಯನ್ನು (Baahubali) ಯಶಸ್ವಿಯಾಗಿ ನಭಕ್ಕೆ ಹಾರಿಸಿದೆ. ಭಾರತೀಯ ರಾಕೆಟ್‌ನಲ್ಲೇ (Indian rocket) ಅತ್ಯಂತ ಭಾರವಾದ ಉಪಗ್ರಹ (heaviest satellite) ಬಾಹುಬಲಿಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿತು.

ಸಿಎಮ್ಎಸ್-03 ಬಹು-ಬ್ಯಾಂಡ್ ಸಂವಹನ ಉಪಗ್ರಹವಾಗಿದ್ದು, ಇದು ಭಾರತೀಯ ಭೂಪ್ರದೇಶ ಸೇರಿದಂತೆ ವಿಶಾಲವಾದ ಸಾಗರ ಪ್ರದೇಶದ ಮೇಲೆ ಸೇವೆಗಳನ್ನು ಒದಗಿಸುತ್ತದೆ ಎಂದು ಇಸ್ರೊ ಹೇಳಿದೆ. ಎಲ್‌ವಿಎಂ 3 ರಾಕೆಟ್ ಭಾರತದ ಅತ್ಯಂತ ಭಾರವಾದ ಉಡಾವಣಾ ವಾಹನವಾಗಿದೆ. ಒಟ್ಟು 4410 ಕೆಜಿ ಇದ್ದು, ದೇಶದ ಬಾಹ್ಯಾಕಾಶ ಕೇಂದ್ರದಿಂದ ಇದೇ ಮೊದಲ ಬಾರಿಗೆ ಉಡಾಯನ ಮಾಡಿದ ಭಾರಿ ತೂಕದ ಉಪಗ್ರಹ ಇದಾಗಿದೆ ಎಂದು ಇಸ್ರೋ ತಿಳಿಸಿದೆ.