ಸಮಾಜದ ಲೀಡರ್ ಆಗಿ ಜಮೀರ್ ಅಹ್ಮದ್ ಸಮಾಜಘಾತುಕ ಶಕ್ತಿಗಳಿಗೆ ನೆರವಾಗುತ್ತಿರುವುದು ಖಂಡನೀಯ: ಆರಗ ಜ್ಞಾನೇಂದ್ರ
ಜಮೀರ್ ಮತ್ತು ಅವರ ಬೆಂಬಲಿಗರ ಕ್ರಮವನ್ನು ಉಗ್ರವಾಗಿ ಖಂಡಿಸಿದ ಸಚಿವರು, ಕೇವಲ ಹುಬ್ಬಳ್ಳಿ ಮಾತ್ರವಲ್ಲ ಹಿಂದೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗಳಲ್ಲೂ ಅವರು ಎಷ್ಟೆಷ್ಟು ದುಡ್ಡು ಖರ್ಚು ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ ಎಂದರು.
Bengaluru: ಹುಬ್ಬಳ್ಳಿಯಲ್ಲಿ ಗಲಭೆ ನಡೆಸಿದ 100 ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ (Muslim Community) ಜನರನ್ನು ಬಂಧಿಸಿ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳಿಸಲಾಗಿದೆ. ವಾಟ್ಸ್ಯಾಪ್ ನಲ್ಲಿ ಒಂದು ವಿವಾದಾತ್ಮಕ ಪೋಸ್ಟ್ ಹಾಕಿ ಗಲಭೆಗೆ ಕಾರಣನಾದ ಒಬ್ಬ ಹಿಂದೂ ಯುವಕನನ್ನು (Hindu youth) ಸಹ ಬಂಧಿಸಿ ಹುಬ್ಬಳ್ಳಿಯ ಸೆರೆಮನೆ ಒಂದರಲ್ಲಿ ಇರಿಸಲಾಗಿದೆ. ಈ ವಿಷಯವನ್ನು ನೆನಪಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಮಾರಾಯ್ರೇ. ಅದನ್ನೇ ಶುಕ್ರವಾರದಂದು ಬೆಂಗಳೂರಲ್ಲಿ ಮಾಧ್ಯಮದವರು ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರಿಗೆ ಕೇಳಲಾಯಿತು. ಮಾಧ್ಯಮಗಳಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಲಬುರಗಿ ಜೈಲಿನಲ್ಲಿರುವ ಹುಬ್ಬಳ್ಳಿ ಮುಸ್ಲಿಂ ಸಮುದಾಯದ ಜನರಿಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಅವರ ಬೆಂಬಲಿಗರು ಐದೈದು ಸಾವಿರ ರೂಪಾಯಿಗಳನ್ನು ನೀಡುತ್ತಿದ್ದಾರೆ.
ಜಮೀರ್ ಮತ್ತು ಅವರ ಬೆಂಬಲಿಗರ ಕ್ರಮವನ್ನು ಉಗ್ರವಾಗಿ ಖಂಡಿಸಿದ ಸಚಿವರು, ಕೇವಲ ಹುಬ್ಬಳ್ಳಿ ಮಾತ್ರವಲ್ಲ ಹಿಂದೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗಳಲ್ಲೂ ಅವರು ಎಷ್ಟೆಷ್ಟು ದುಡ್ಡು ಖರ್ಚು ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ಅವರು ಆ ಸಮಾಜ ನಾಯಕರಾಗಿ ಇಂಥ ಕೃತ್ಯಗಳನ್ನು ಖಂಡಿಸಬೇಕು. ಅದನ್ನು ಬಿಟ್ಟು ಇಂಥವರಿಗೆ ಕುಮ್ಮಕ್ಕು ನೀಡಿದರೆ ಸಮಾಜದ ಶಾಂತಿ ಕದಡುತ್ತದೆ, ದೇಶದ ಏಕತೆ ಮತ್ತು ಸಮಾಗ್ರತೆ ಹಾಳಾಗುತ್ತದೆ ಎಂದು ಜ್ಞಾನೇಂದ್ರ ಹೇಳಿದರು.
ಪ್ರಿಯಾಂಕ್ ಖರ್ಗೆ ಅವರ ಬಗ್ಗೆಯೂ ಮಾತಾಡಿದ ಸಚಿವರು, ತಮ್ಮಲ್ಲಿರುವ ಸಾಕ್ಷ್ಯಗಳನ್ನು ತಂದು ತೋರಿಸುವಂತೆ ಸಿಐಡಿ ಅಧಿಕಾರಿಗಳು ಕಾಂಗ್ರೆಸ್ ಶಾಸಕರಿಗೆ ಹೇಳಿದರೂ ಅವರು ಅದನ್ನು ಮಾಡುತ್ತಿಲ್ಲ. ದಾಖಲೆಗಳ ಬಗ್ಗೆ ಖುದ್ದು ಅವರೇ ಮಾಧ್ಯಮದ ಎದುರು ಬಹಿರಂಗಪಡಿಸಿದ್ದಾರೆ. ಖರ್ಗೆ ಅವರು ಮಾಹಿತಿಯನ್ನು ಅಧಿಕಾರಿಗಳ ಜೊತೆ ಹಂಚಿಕೊಳ್ಳುವ ಬದಲು ರಾಜಕೀಯ ಲಾಭ ಪಡೆಯುವ ಹುನ್ನಾರ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಹೇಳಿದರು.
ಇದನ್ನೂ ಓದಿ: ಆರಗ ಜ್ಞಾನೇಂದ್ರ ಯಾವತ್ತೂ ಸಮಾಜಘಾತುಕ ಶಕ್ತಿಗಳ ಪರ ಮಾತಾಡಿದವರಲ್ಲ: ಸಿಟಿ ರವಿ