AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KMS hits back at HDK; ಕುಮಾರಸ್ವಾಮಿ ಹಿಟ್ ಅಂಡ್ ರನ್ ಪ್ರವೃತ್ತಿಯನ್ನು ಬಿಡಬೇಕು: ಕೆಎಂ ಶಿವಲಿಂಗೇಗೌಡ, ಶಾಸಕ

KMS hits back at HDK; ಕುಮಾರಸ್ವಾಮಿ ಹಿಟ್ ಅಂಡ್ ರನ್ ಪ್ರವೃತ್ತಿಯನ್ನು ಬಿಡಬೇಕು: ಕೆಎಂ ಶಿವಲಿಂಗೇಗೌಡ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jul 04, 2023 | 1:51 PM

Share

ಸಿಎಂ ಕಚೇರಿಯಲ್ಲಿ ರೂ. 30 ಲಕ್ಷ ಕೇಳುತ್ತಾರೆ ಅಂತ ಕುಮಾರಸ್ವಾಮಿ ಸುಖಾ ಸುಮ್ಮನೆ ಅರೋಪ ಮಾಡುತ್ತಾರೆ ಎಂದು ಗೌಡರು ಹೇಳಿದರು.

ಬೆಂಗಳೂರು: ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ, ಅದ್ಯಾವ ವಿಡಿಯೋ ಅವರ ಬಳಿ ಇದೆಯೋ ಬಿಡುಗಡೆ ಮಾಡಲಿ, ಅವರನ್ನು ಯಾರಾದರೂ ತಡೆದಿದ್ದಾರಾ? ಎಂದು ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ (KM Shivalingegowda) ಖಾರವಾಗಿ ಪ್ರಶ್ನಿಸಿದರು. ಕುಮಾರಸ್ವಾಮಿ ತನ್ನ ವೈರಿಯೇನೂ ಅಲ್ಲ, ಆದರೆ ಹಿಟ್ ಅಂಡ್ ರನ್ ಪ್ರವೃತ್ತಿ (hit and run approach) ಅನುಸರಿಸುವುದು ಬೇಡ ಅಂತ ಅವರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಗೌಡರು ಹೇಳಿದರು. ಸಿಎಂ ಕಚೇರಿಯಲ್ಲಿ ರೂ. 30 ಲಕ್ಷ ಕೇಳುತ್ತಾರೆ ಅಂತ ಅವರು ಸುಖಾ ಸುಮ್ಮನೆ ಅರೋಪ ಮಾಡುತ್ತಾರೆ. ಹಿಂದೆ ತಾವು ಆರೋಪಗಳಿಗೆ ಅವರು ಸೂಕ್ತ ಸಾಕ್ಷ್ಯಾಧಾರಗಳನ್ನು ಸಲ್ಲಿಸಿ ಯಾರಿಗೆ ಎಲ್ಲಿ ಕಳಿಸಬೇಕೋ ಅಲ್ಲಿಗೆ ಕಳಿಸಿದ್ದರು, ಈಗಲೂ ಹಾಗೆ ಮಾಡಲಿ ಎಂದು ಶಿವಲಿಂಗೇಗೌಡ ಸವಾಲೆಸೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.