ಮಹಾರಾಣಿ ಕಾಲೇಜಲ್ಲಿ ಅಪಘಾತ: ಒಬ್ಬ ಹಿರಿಯ ಪ್ರೊಫೆಸರ್ ಅದ್ಹೇಗೆ ಕಾಲೇಜು ಆವರಣದೊಳಗೆ ಮಿತಿಮೀರಿದ ವೇಗದಲ್ಲಿ ಕಾರು ಓಡಿಸುತ್ತಾರೆ?
ಡಿಸಿಪಿ ಸಚಿನ್ ಘೋರ್ಪಡೆ ಹೇಳುವ ಪ್ರಕಾರ ಅಪಘಾತ ನಡೆಸಿದ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಹೆಚ್ ನಾಗರಾಜ್ ಅನ್ನೋರು ಭಯಂಕರ ವೇಗದಲ್ಲಿ ತಮ್ಮ ಕಾರನ್ನು ಕಾಲೇಜು ಆವರಣದಲ್ಲಿ ಓಡಿಸಿಕೊಂಡು ಬಂದು ಬ್ರೇಕ್ ಬದಲು ಆಕ್ಸಿಲೇಟರ್ ಮೇಲೆ ಕಾಲು ಒತ್ತಿದ ಕಾರಣ ಕಾರು ಅವರ ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣವಾಗಿದೆ.
ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿರುವ ಮಹಾರಾಣಿ ಕಾಲೇಜಿನಲ್ಲಿ (Maharani College) ಇಂದು ಬೆಳಗ್ಗೆ ಒಂದು ವಿಚಿತ್ರವಾದ ಅಪಘಾತ ಸಂಭವಿಸಿದ್ದು ಇಬ್ಬರು ವಿದ್ಯಾರ್ಥಿನಿಯರು-ಅಶ್ವಿನಿ ಹಾಗೂ ನಂದುಪ್ರಿಯಾ ಹಾಗೂ ಒಬ್ಬ ಸಂಗೀತ ಟೀಚರ್-ಜ್ಯೋತಿ ಅನ್ನುವವರಿಗೆ ಗಾಯಗಳಾಗಿವೆ. ಬಿ ಕಾಂ ವಿದ್ಯಾರ್ಥಿನಿ ಅಶ್ವಿನಿಗೆ (Ashwini) ತಲೆ ಮತ್ತು ಕಾಲಿಗೆ ಪೆಟ್ಟಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಅಂತ ಹೇಳಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ನಗರ ಉತ್ತರ ಸಂಚಾರಿ ವಿಭಾಗದ ಡಿಸಿಪಿ ಸಚಿನ್ ಘೋರ್ಪಡೆ ಹೇಳುವ ಪ್ರಕಾರ ಅಪಘಾತ ನಡೆಸಿದ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಹೆಚ್ ನಾಗರಾಜ್ (English professor H Nagaraj) ಅನ್ನೋರು ಭಯಂಕರ ವೇಗದಲ್ಲಿ ತಮ್ಮ ಕಾರನ್ನು ಕಾಲೇಜು ಆವರಣದಲ್ಲಿ ಓಡಿಸಿಕೊಂಡು ಬಂದು ಬ್ರೇಕ್ ಬದಲು ಆಕ್ಸಿಲೇಟರ್ ಮೇಲೆ ಕಾಲು ಒತ್ತಿದ ಕಾರಣ ಕಾರು ಅವರ ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯರಿಗೆ ಗುದ್ದುವ ಮೊದಲು ನಾಗರಾಜ್ ಕಾರು ಆವರಣದಲ್ಲಿ ಪಾರ್ಕ್ ಆಗಿದ್ದ ಒಂದು ಕಾರಿನ ಹಿಂಬದಿಗೆ ಗುದ್ದಿ ಕೊನೆಯಲ್ಲಿ ಮರಕ್ಕೆ ಢಿಕ್ಕಿ ಹೊಡೆದು ನಿಶ್ಚಲ ಸ್ಥಿತಿಗೆ ಬಂದಿದೆ. ನಾಗರಾಜ್ ಅವರಿಗೂ ಗಾಯಗಳಾಗಿವೆ ಎಂದು ಡಿಸಿಪಿ ಹೇಳುತ್ತಾರೆ. ಇಲ್ಲಿ ಉದ್ಭವಿಸುವ ಪ್ರಸ್ನೇಯೇನೆಂದರೆ, ಕಾಲೇಜಿನ ಅವರಣದಲ್ಲಿ ನಾಗರಾಜ್ ಅದ್ಹೇಗೆ ಅಷ್ಟು ವೇಗದಲ್ಲಿ ಕಾರು ಓಡಿಸುತ್ತಾರೆ? 52-ವರ್ಷ ವಯಸ್ಸಿನ ಅವರು ಬ್ರೇಕ್ ಬದಲು ಆಕ್ಸಿಲೇಟರ್ ಹೇಗೆ ಅದುಮುತ್ತಾರೆ? ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ