ಕೋರ್ಟ್ ತೀರ್ಪನ್ನು ಓದದೆ ಪ್ರಜ್ವಲ್ ಅನರ್ಹಗೊಂಡ ಬಗ್ಗೆ ಕಾಮೆಂಟ್ ಮಾಡೋದು ಮಾಜಿ ಪ್ರಧಾನಿಯಾಗಿ ಸರಿಯೆನಿಸದು: ಹೆಚ್ ಡಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ

Updated on: Sep 02, 2023 | 6:55 PM

ದೇವಸ್ಥಾನದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದೇವೇಗೌಡರು, ಹೈಕೋರ್ಟ್ ತೀರ್ಪನ್ನು ಓದದೆ ಪ್ರಜ್ವಲ್ ಅನರ್ಹಗೊಂಡಿರುವ ಬಗ್ಗೆ ಮಾತಾಡುವುದು ಒಬ್ಬ ಮಾಜಿ ಪ್ರಧಾನ ಮಂತ್ರಿಯಾಗಿ ತಮಗೆ ಸರಿಯೆನಿಸದು ಅಂತ ಹೇಳಿದರು. ಅವರನ್ನು ಅನರ್ಹಗೊಳಿಸಲಾಗಿದೆ ಎಂಬ ಒಂದು ವಾಕ್ಯ ಮಾತ್ರ ತಮಗೆ ಗೊತ್ತಾಗಿದೆ ಎಂದು ಮಾಜಿ ಪ್ರಧಾನಿ ಹೇಳಿದರು.

ಹಾಸನ: ಶ್ರಾವಣ ಮಾಸದ ಶನಿವಾರದಂದು ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ (HD Devegowda) ತಮ್ಮ ಕುಟುಂಬದ ಸದಸ್ಯರೊಂದಿಗೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ (Mavinakere Ranganath Swamy temple) ವಿಶೇಷ ಪೂಜೆ ಸಲ್ಲಿಸಿದರು. ಗೌಡರ ಕುಟುಂಬಕ್ಕೆ ಕೆಲ ಹಿನ್ನಡೆಗಳು ಕಳೆದ ಕೆಲ ದಿನಗಳಲ್ಲಿ ಎದುರಾಗಿವೆ. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮೈಲ್ಡ್ ಸ್ಟ್ರೋಕ್ ಗೊಳಗಾಗಿ ಬೆಂಗಳೂರಿನ ಆಸ್ಪತ್ರೆಯೊಂದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನು (Prajwal Revanna) ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಈ ಬೆಳವಣಿಗೆಗಳಿಂದ ದೇವೇಗೌಡ ಮತ್ತು ಕುಟಂಬ ವಿಚಲಿತಗೊಂಡಿದೆ. ದೇವಸ್ಥಾನದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದೇವೇಗೌಡರು, ಹೈಕೋರ್ಟ್ ತೀರ್ಪನ್ನು ಓದದೆ ಪ್ರಜ್ವಲ್ ಅನರ್ಹಗೊಂಡಿರುವ ಬಗ್ಗೆ ಮಾತಾಡುವುದು ಒಬ್ಬ ಮಾಜಿ ಪ್ರಧಾನ ಮಂತ್ರಿಯಾಗಿ ತಮಗೆ ಸರಿಯೆನಿಸದು ಅಂತ ಹೇಳಿದರು. ಅವರನ್ನು ಅನರ್ಹಗೊಳಿಸಲಾಗಿದೆ ಎಂಬ ಒಂದು ವಾಕ್ಯ ಮಾತ್ರ ತಮಗೆ ಗೊತ್ತಾಗಿದೆ ಎಂದು ಮಾಜಿ ಪ್ರಧಾನಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.