ನೈಸ್​ ಅಕ್ರಮ ಮಾಡಿದವರ ಪಟ್ಟಿ ಇದೆ ಎಂದ ಹೆಚ್​​ ಡಿ ದೇವೇಗೌಡ; ನಮ್ಮ ಬಳಿ ಇರುವ ಪಟ್ಟಿ ತೆಗೆಯಲಾ: ಡಿಕೆ ಶಿವಕುಮಾರ್​​ ಸವಾಲ್​

ಅವರು ಯಾರು ಏನು ಬೇಕಾದರೂ ಮಾಡಲಿ. ಹಿಂದೆ ಅಧಿಕಾರದಲ್ಲಿದ್ದಾಗ ಅವರು ಯಾಕೆ ತನಿಖೆ ಮಾಡಿಸಲಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರನ್ನು ಗಲ್ಲಿಗೆ ಹಾಕಲಿ. ಈಗಲೂ ತನಿಖೆ ಮಾಡಿಸುವಂತ ಅಧಿಕಾರ ಅವರಿಗೆ ಇದೆ ತನಿಖೆ ಮಾಡಿಸಲಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದರು.

ನೈಸ್​ ಅಕ್ರಮ ಮಾಡಿದವರ ಪಟ್ಟಿ ಇದೆ ಎಂದ ಹೆಚ್​​ ಡಿ ದೇವೇಗೌಡ; ನಮ್ಮ ಬಳಿ ಇರುವ ಪಟ್ಟಿ ತೆಗೆಯಲಾ: ಡಿಕೆ ಶಿವಕುಮಾರ್​​ ಸವಾಲ್​
ಡಿಸಿಎಂ ಡಿಕೆ ಶಿವಕುಮಾರ್​
Follow us
| Edited By: ವಿವೇಕ ಬಿರಾದಾರ

Updated on: Aug 28, 2023 | 2:54 PM

ಬೆಂಗಳೂರು: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು (HD Devegowda) ಇಂದು ಧಿಡೀರ್​ ಸುದ್ದಿಗೋಷ್ಠಿ ನಡೆಸಿ ಹಲವು ವಿಚಾರಗಳ ಕುರಿತು ಮಾತನಾಡಿದರು. ಈ ವೇಳೆ ದೇವೇಗೌಡರು ನೈಸ್​ ಹಗರಣಗಳ ಕುರಿತು ಪ್ರಸ್ತಾಪಿಸಿದರು. ನೈಸ್​ ರಸ್ತೆ ನಿರ್ಮಾಣಕ್ಕೆಂದು ರೈತರ ಭೂಮಿ ಹಾಗೂ ಅಕ್ರಮದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂಬ ಪಟ್ಟಿ ಇದೆ ಎಂದು ಹೇಳಿದ್ದರು. ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಪ್ರತಿಕ್ರಿಯಿಸಿ ರಾಜಕಾರಣಿಗಳದ್ದು ಯಾರ ಪಟ್ಟಿಯೂ ನಮ್ಮ ಬಳಿ ಇಲ್ವಾ? ನಮ್ಮ ಬಳಿ ಇರುವ ಪಟ್ಟಿ ತೆಗೆಯಲಾ? ಒಂದು ಗುಂಟೆ ಭೂಮಿ ಇಲ್ಲ ಅಂತಾರೆ, ಹಾಗಾದರೇ ಇವರ ಬಳಿ ಏನೂ ಇಲ್ವಾ ? ಈಗಾಗಲೇ ನಮ್ಮ ಆಸ್ತಿ ಬಗ್ಗೆ ಇಡಿ, ಐಟಿ ಸ್ಕ್ಯಾನ್​ ಮಾಡಿ ವರದಿ ನೀಡಿದೆ ಎಂದು ತಿರುಗೇಟು ನೀಡಿದರು.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಯಾರು ಏನು ಬೇಕಾದರೂ ಮಾಡಲಿ. ಹಿಂದೆ ಅಧಿಕಾರದಲ್ಲಿದ್ದಾಗ ಇವರಿಗೆ ಅಧಿಕಾರ ಇತ್ತು ಯಾಕೆ ತನಿಖೆ ಮಾಡಲಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರನ್ನು ಗಲ್ಲಿಗೆ ಹಾಕಲಿ. ಈಗಲೂ ತನಿಖೆ ಮಾಡಿಸುವಂತ ಅಧಿಕಾರ ಅವರಿಗೆ ಇದೆ. ತನಿಖೆ ಮಾಡಿಸಲಿ ಎಂದರು. ನೈಸ್​​ ರಸ್ತೆ ನಿರ್ಮಾಣದ ವೇಳೆ ಅಧಿಕಾರಿ ಯಾರಿದ್ರು? ರೈತರು ಯಾರಿದ್ರು? ಅಂತ ಗೊತ್ತಿದೆ. ನಮ್ಮ ಬಳಿಯೂ ಪಟ್ಟಿದೆ. ನಮ್ಮ ಬಳಿ ಇರುವ ಪಟ್ಟಿ ತೆಗಿಲಾ ? ಒಂದು ಕುಂಟೆ ಭೂಮಿ ಇಲ್ಲ ಅಂತಾರೆ. ಹಾಗಾದರೇ ಇವರದ್ದು ಏನೂ ಇಲ್ವಾ ಅಂತ ಹೆಚ್​​ಡಿ ದೇವೇಗೌಡರಿಗೆ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಯಾವ ಶಾಸಕರೂ ಜೆಡಿಎಸ್​​ ಬಿಟ್ಟು ಹೋಗುವುದಿಲ್ಲ; ಹೆಚ್​ಡಿ ದೇವೇಗೌಡ ಸ್ಪಷ್ಟನೆ

ನಾನು ಈಗ ಮೈಸೂರಿಗೆ ಹೋಗುತ್ತಿದ್ದೇನೆ. ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿದೆ. ನಾನು ಸಿದ್ದರಾಮಯ್ಯನವರು ಗ್ಯಾರಂಟಿ ಕಾರ್ಡ್​ಗೆ ಸಹಿ‌ ಮಾಡಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ ಮಾಡಿ ಆರ್ಶಿರ್ವಾದ ಪಡೆಯುತ್ತೇವೆ. ಇವತ್ತು ಟ್ರಯಲ್ ರನ್ ಶುರು ಮಾಡುತ್ತೇವೆ ಎಂದರು.

ಗೃಹಲಕ್ಷ್ಮೀ ಯೋಜನೆ ಜಾರಿಗೆ ಜನ ಸೇರಿಸಲು ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾವು ಯಾರಿಗೂ ಜನರನ್ನು ಸೇರಿಸಿ ಅಂತ ಹೇಳಿಲ್ಲ. ಸರ್ಕಾರಿ ಕಾರ್ಯಕ್ರಮ ಆಗಿರುವುದರಿಂದ ಸರ್ಕಾರಿ ಆಮಂತ್ರಣ ಕೊಡುವುದು ಅವರ ಕರ್ತವ್ಯ. ಇದು ಸರ್ಕಾರಿ ಕಾರ್ಯಕ್ರಮ. ಪಕ್ಷ ಭೇದ ಮರೆತು ಕಾರ್ಯಕ್ರಮ ಮಾಡಬೇಕು. ಬಿಜೆಪಿ, ಜೆಡಿಎಸ್​​ನ ಶಾಸಕರಿಗೆ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಿ ಅಂತ ಹೇಳಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿರುವ ಬಿಬಿಎಂಪಿ ಚೀಫ್ ಇಂಜಿನಿಯರ್ ಶಿವಕುಮಾರ್ ಆರೋಗ್ಯ ಸ್ಥಿತಿ ಕ್ರಿಟಿಕಲ್ ಇದೆ. ಇನ್ನೂ ಹದಿನಾರು ವರ್ಷ ಸರ್ವೀಸ್ ಇದೆ. ಕಳೆದ ಬಾರಿ ಭೇಟಿಯಾದಾಗ ಆರೋಗ್ಯವಾಗಿದ್ದರು. ಈಗ ಸ್ವಲ್ಪ ಸ್ಥಿತಿ ಕ್ರಿಟಿಕಲ್ ಆಗಿದೆ. ಅಪೋಲೊ ಆಸ್ಪತ್ರೇಲಿ ಒಳ್ಳೆ ಚಿಕಿತ್ಸೆ ಕೊಡುತ್ತಾರೆ ಅಂತ ದಾಖಲಿಸಿದ್ದೇವೆ. ಮತ್ತೊಬ್ಬರು ಜ್ಯೋತಿ ಅಂತ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಪ್ರಕರಣ ಸಂಬಂಧ ಸಂಬಂಧಪಟ್ಟ ಇಲಾಖೆಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಬಿಬಿಎಂಪಿ, ಪೊಲೀಸರು, ಇಂಧನ ಇಲಾಖೆಯಿಂದ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ