‘ಜಾಕಿ’ ಬಿಡುಗಡೆ ಬಳಿಕ ಪುನೀತ್​, ಸೂರಿ ಜೊತೆಯಾಗಿ ನೀಡಿದ್ದ ಸಂದರ್ಶನ ಇಲ್ಲಿದೆ..

Updated on: Mar 14, 2024 | 8:05 PM

ಮಾರ್ಚ್​ 15ರಂದು ‘ಜಾಕಿ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. 14 ವರ್ಷಗಳ ಹಿಂದೆ ಈ ಸಿನಿಮಾ ತೆರೆಕಂಡ ಬಳಿಕ ‘ಟಿವಿ9 ಕನ್ನಡ’ಕ್ಕೆ ನಿರ್ದೇಶಕ ಸೂರಿ ಮತ್ತು ನಟ ಪುನೀತ್​ ರಾಜ್​ಕುಮಾರ್​ ಅವರು ಸಂದರ್ಶನ ನೀಡಿದ್ದರು. ಟಿವಿ9 ಡಿಜಿಟಲ್​ನಲ್ಲಿ ಅದರ ಮರುಪ್ರಸಾರ ಲಭ್ಯವಿದೆ. ಅಂದು ಪುನೀತ್​ ಮತ್ತು ದುನಿಯಾ ಸೂರಿ ಅವರು ಆಡಿದ ಮಾತುಗಳ ಮೆಲುಕು ಇಲ್ಲಿದೆ..

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಅಭಿಮಾನಿಗಳ ಪಾಲಿಗೆ ‘ಜಾಕಿ’ ಸಿನಿಮಾ ತುಂಬ ವಿಶೇಷವಾದದ್ದು. 2010ರ ಅಕ್ಟೋಬರ್​ನಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ ಮತ್ತೆ ಮರುಬಿಡುಗಡೆ ಆಗುತ್ತಿದೆ. ಪುನೀತ್ ರಾಜ್​ಕುಮಾರ್ ಅವರ ಜನ್ಮದಿನದ ಹೊಸ್ತಿಲಿನಲ್ಲಿ ಮಾರ್ಚ್​ 15ರಂದು ‘ಜಾಕಿ’ ಚಿತ್ರ (Jackie Movie) ರೀ-ರಿಲೀಸ್​ ಆಗಲಿದೆ. ಈ ಸಂದರ್ಭದಲ್ಲಿ ಪುನೀತ್​ ರಾಜ್​ಕುಮಾರ್​ ಅವರನ್ನು ಅಭಿಮಾನಿಗಳು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. 2010ರಲ್ಲಿ ಸಿನಿಮಾ ಬಿಡುಗಡೆ ಆದ ಬಳಿಕ ‘ಟಿವಿ9 ಕನ್ನಡ’ಕ್ಕೆ ಪುನೀತ್​ ರಾಜ್​ಕುಮಾರ್​ ಹಾಗೂ ನಿರ್ದೇಶಕ ಸೂರಿ (Duniya Suri) ಅವರು ಸಂದರ್ಶನ ನೀಡಿದ್ದರು. ಈಗ ಮರುಬಿಡುಗಡೆ ಪ್ರಯುಕ್ತ ಟಿವಿ9 ಡಿಜಿಟಲ್​ನಲ್ಲಿ ಆ ಸಂದರ್ಶನದ ಮರು ಪ್ರಸಾರ ಆಗಿದೆ. ಈ ಸಿನಿಮಾವನ್ನು ಪುನೀತ್ ರಾಜ್​ಕುಮಾರ್​ ಅವರು ಒಪ್ಪಿಕೊಂಡಿದ್ದು ಹೇಗೆ? ತೆರೆ ಹಿಂದೆ ಏನೆಲ್ಲ ನಡೆದಿತ್ತು? ಹಾಡುಗಳು ಹುಟ್ಟಿದ ಕ್ಷಣ ಹೇಗಿತ್ತು? ಒಟ್ಟಾರೆ ಸಿನಿಮಾದ ವಿಶೇಷತೆ ಏನು ಎಂಬಿತ್ಯಾದಿ ಪ್ರಶ್ನೆಗಳಿಗೆ ಪುನೀತ್​ ಮತ್ತು ಸೂರಿ ಅವರು ಉತ್ತರ ನೀಡಿದ್ದರು. 14 ವರ್ಷಗಳ ಹಿಂದಿನ ಅಪರೂಪದ ಸಂದರ್ಶನ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More