ಎಲ್ಲ ಕಲಾವಿದರಿಗೂ ನಟ ಜಗ್ಗೇಶ್ (Jaggesh) ಅವರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈಗ ಯೋಗಿ ಮಾಡಿದ ಮಿಮಿಕ್ರಿಯನ್ನು ಕಂಡು ‘ನವರಸ ನಾಯಕ’ ಫಿದಾ ಆಗಿದ್ದಾರೆ. ಜಗ್ಗೇಶ್ ನಟನೆಯ ‘ತೋತಾಪುರಿ’ (Totapuri) ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಭಾನುವಾರ (ಸೆ.25) ನಡೆಯಿತು. ಈ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್ (Shivarajkumar), ಅನಂತ್ ನಾಗ್ ಮುಂತಾದವರ ರೀತಿ ಯೋಗಿ ಮಿಮಿಕ್ರಿ ಮಾಡಿದರು. ವೇದಿಕೆ ಮೇಲೆ ಅವರ ಪ್ರತಿಭೆಯನ್ನು ಜಗ್ಗೇಶ್ ಹಾಡಿ ಹೊಗಳಿದರು. ‘ತೋತಾಪುರಿ’ ಸಿನಿಮಾ ಸೆ.30ರಂದು ಬಿಡುಗಡೆ ಆಗಲಿದೆ.