ಮತ್ತೆ ಅಶ್ವಿನಿ ಗೌಡ ಜೊತೆ ಒಂದಾಗುವ ಆಸೆ ವ್ಯಕ್ತಪಡಿಸಿದ ಜಾಹ್ನವಿ

Updated on: Nov 04, 2025 | 8:39 PM

ಬಿಗ್ ಬಾಸ್ ಶುರು ಆದಾಗ ಜಾಹ್ನವಿ, ಅಶ್ವಿನಿ ಗೌಡ ಬಹಳ ಆಪ್ತವಾಗಿದ್ದರು. ಆದರೆ ಆ ಸ್ನೇಹದಿಂದ ಅವರ ಆಟಕ್ಕೆ ಸಮಸ್ಯೆ ಆಯಿತು. ನಂತರ ಅವರಿಬ್ಬರು ಕಿರಿಕ್ ಮಾಡಿಕೊಂಡರು. ಇದರಿಂದಾಗಿ ಇಬ್ಬರಿಗೂ ಒಳ್ಳೆಯದೇ ಆಗಿದೆ. ಆದರೆ ಜಾಹ್ನವಿ ಅವರು ಮತ್ತೆ ಅಶ್ವಿನಿ ಗೌಡ ಜತೆ ಕೈ ಜೋಡಿಸುವ ಆಸೆ ವ್ಯಕ್ತಪಡಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭ ಆದಾಗ ಜಾಹ್ನವಿ ಮತ್ತು ಅಶ್ವಿನಿ ಗೌಡ (Ashwini Gowda) ಅವರು ಬಹಳ ಆಪ್ತವಾಗಿದ್ದರು. ಆದರೆ ಆ ಸ್ನೇಹದಿಂದ ಅವರಿಬ್ಬರ ಆಟಕ್ಕೆ ತೊಂದರೆ ಆಯಿತು. ಬಳಿಕ ಅವರಿಬ್ಬರು ಜಗಳ ಮಾಡಿಕೊಂಡರು. ಇದರಿಂದಾಗಿ ಇಬ್ಬರಿವೂ ಒಳ್ಳೆಯೇ ಆಗಿದೆ. ಆದರೆ ಮತ್ತೆ ಜಾಹ್ನವಿ ಅವರು ಅಶ್ವಿನಿ ಗೌಡ ಜೊತೆ ಸ್ನೇಹ ಬೆಳೆಸುವ ಆಸೆ ವ್ಯಕ್ತಪಡಿಸಿದ್ದಾರೆ. ಕಾವ್ಯ ಬಳಿ ಈ ಬಗ್ಗೆ ಜಾಹ್ನವಿ (Jahnavi) ಅವರು ಭವಿಷ್ಯ ಕೇಳಿದ್ದಾರೆ. ‘ಜಾಹ್ನವಿ ಮತ್ತು ಅಶ್ವಿನಿ ಗೌಡ ಸೇರುವುದಿಲ್ಲ. ಅಶ್ವಿನಿ ವಿರುದ್ಧ ಜಾನ್ವಿ. ಜಾನ್ವಿ ವಿರುದ್ಧ ಅಶ್ವಿನಿ. ಇದೇ ಭವಿಷ್ಯ’ ಎಂದು ಕಾವ್ಯ ಹೇಳಿದ್ದಾರೆ. ನವೆಂಬರ್ 4ರ ಸಂಚಿಕೆಯ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.