‘ನಾನು ಇಂಡಸ್ಟ್ರಿಯಲ್ಲಿ ಇರೋವರೆಗೂ ಅವರು ನನ್ನ ಜತೆ ಇರ್ತಾರೆ’: ವಿಗ್​ ಕಲಾವಿದ ರಾಜು ಬಗ್ಗೆ ಶಿವಣ್ಣನ ಮಾತು

|

Updated on: Apr 03, 2023 | 9:56 AM

Shivarajkumar | Wig maker Raju: ರಾಜು ಅವರ ವಿಗ್​ ಶಾಪ್​ಗೆ ಶಿವರಾಜ್​ಕುಮಾರ್​ ಭೇಟಿ ನೀಡಿದ್ದಾರೆ. ತಮ್ಮ ಫೇವರಿಟ್​ ವಿಗ್​ ಮೇಕರ್​ ಬಗ್ಗೆ ಅವರು ಮನಸಾರೆ ಮಾತನಾಡಿದರು.

ನಟ ಶಿವರಾಜ್​ಕುಮಾರ್​ (Shivarajkumar) ಅವರು ಈವರೆಗೂ ಅನೇಕ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲ ಪಾತ್ರಗಳಿಗೆ ವಿಗ್​ ತಯಾರಿಸಿದ್ದು ಕಲಾವಿದ ರಾಜು. ಇತ್ತೀಚೆಗೆ ರಾಜು (Wig Artist Rajanna) ಅವರ ವಿಗ್​ ಶಾಪ್​ಗೆ ಶಿವರಾಜ್​ಕುಮಾರ್​ ಭೇಟಿ ನೀಡಿದರು. ತಮ್ಮ ಫೇವರಿಟ್​ ವಿಗ್​ ಮೇಕರ್​ ಬಗ್ಗೆ ಅವರು ಮನಸಾರೆ ಮಾತನಾಡಿದರು. ‘ಕಲೆಗೆ ಬೆಲೆ ನೀಡಬೇಕು. ರಾಜು ಒಳ್ಳೆಯ ಕೆಲಸಗಾರ, ಒಳ್ಳೆಯ ಮನುಷ್ಯ. ಕೆಲಸದಲ್ಲಿ ಅವರಿಗೆ ಶ್ರದ್ಧೆ ಇದೆ. ನನ್ನ ಡಿಫರೆಂಟ್​ ಲುಕ್​ಗೆ ಅವರೇ ಕಾರಣ. ನನ್ನ ಎಲ್ಲ ಸಿನಿಮಾಗಳಿಗೆ ಅವರೇ ವಿಗ್​ ಮಾಡೋದು. ನಾನು ಇಂಡಸ್ಟ್ರಿಯಲ್ಲಿ ಇರೋತನಕ ಅವರು ನನ್ನ ಜೊತೆ ಇರ್ತಾರೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Apr 03, 2023 09:56 AM