Karnataka Assembly Polls: ಸುಮಲತಾ ಅಂಬರೀಷ್ ಅಪ್ರಬುದ್ಧ ರಾಜಕಾರಣಿ ಎಂದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ
ಜೆಡಿಎಸ್ ಪಕ್ಷ ಹೇಗೆ ಅಸ್ತಿತ್ವಕ್ಕೆ ಬಂದಿದೆ ಅಂತ ಸುಮಲತಾ ಅವರಿಗೆ ಗೊತ್ತಿಲ್ಲ, ಅವರೊಬ್ಬ ಅಪ್ರಬುದ್ಧ ರಾಜಕಾರಣಿ, ಬಿಜೆಪಿಯ ಆಕಸ್ಮಿಕ ಕೂಸು ಎಂದು ಶ್ರೀಕಂಠಯ್ಯ ಹೇಳಿದರು.
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ (Ravindra Srikantaiah), ತಮ್ಮ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ ಸಚಿವ ಕೆಸಿ ನಾರಾಯಣ ಗೌಡ (KC Narayana Gowda) ಮತ್ತು ಪಕ್ಷೇತರ ಶಾಸಕಿಯಾಗಿ ಲೋಕಸಭೆಗೆ ಆಯ್ಕೆಯಾಗಿ ಈಗ ಬಿಜೆಪಿಯನ್ನು ಬೆಂಬಲಿಸುತ್ತಿರುವ ಸುಮಲತಾ ಅಂಬರೀಷ್ (Sumalatha Ambareesh) ವಿರುದ್ಧ ವಾಗ್ದಾಳಿ ನಡೆಸಿದರು. ಕೆ ನೆಟ್ಟಹಳ್ಳಿ ಹೋಬಳಿಯಲ್ಲಿ ಮಾತಾಡಿದ ಶ್ರೀಕಂಠಯ್ಯ, ಜೆಡಿಎಸ್ ಭದ್ರಕೋಟೆಯನ್ನು ಬೇಧಿಸುತ್ತೇನೆ, ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಅಂತ ಸುಮಲತಾ ಅವರು ಹೇಳುವುದು ಸರಿಯಲ್ಲ, ಪಕ್ಷ ಹೇಗೆ ಅಸ್ತಿತ್ವಕ್ಕೆ ಬಂದಿದೆ ಅವರಿಗೆ ಗೊತ್ತಿಲ್ಲ, ಅವರೊಬ್ಬ ಅಪ್ರಬುದ್ಧ ರಾಜಕಾರಣಿ, ಬಿಜೆಪಿಯ ಆಕಸ್ಮಿಕ ಕೂಸು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ