‘ನಾನು ಇಂಡಸ್ಟ್ರಿಯಲ್ಲಿ ಇರೋವರೆಗೂ ಅವರು ನನ್ನ ಜತೆ ಇರ್ತಾರೆ’: ವಿಗ್ ಕಲಾವಿದ ರಾಜು ಬಗ್ಗೆ ಶಿವಣ್ಣನ ಮಾತು
Shivarajkumar | Wig maker Raju: ರಾಜು ಅವರ ವಿಗ್ ಶಾಪ್ಗೆ ಶಿವರಾಜ್ಕುಮಾರ್ ಭೇಟಿ ನೀಡಿದ್ದಾರೆ. ತಮ್ಮ ಫೇವರಿಟ್ ವಿಗ್ ಮೇಕರ್ ಬಗ್ಗೆ ಅವರು ಮನಸಾರೆ ಮಾತನಾಡಿದರು.
ನಟ ಶಿವರಾಜ್ಕುಮಾರ್ (Shivarajkumar) ಅವರು ಈವರೆಗೂ ಅನೇಕ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲ ಪಾತ್ರಗಳಿಗೆ ವಿಗ್ ತಯಾರಿಸಿದ್ದು ಕಲಾವಿದ ರಾಜು. ಇತ್ತೀಚೆಗೆ ರಾಜು (Wig Artist Rajanna) ಅವರ ವಿಗ್ ಶಾಪ್ಗೆ ಶಿವರಾಜ್ಕುಮಾರ್ ಭೇಟಿ ನೀಡಿದರು. ತಮ್ಮ ಫೇವರಿಟ್ ವಿಗ್ ಮೇಕರ್ ಬಗ್ಗೆ ಅವರು ಮನಸಾರೆ ಮಾತನಾಡಿದರು. ‘ಕಲೆಗೆ ಬೆಲೆ ನೀಡಬೇಕು. ರಾಜು ಒಳ್ಳೆಯ ಕೆಲಸಗಾರ, ಒಳ್ಳೆಯ ಮನುಷ್ಯ. ಕೆಲಸದಲ್ಲಿ ಅವರಿಗೆ ಶ್ರದ್ಧೆ ಇದೆ. ನನ್ನ ಡಿಫರೆಂಟ್ ಲುಕ್ಗೆ ಅವರೇ ಕಾರಣ. ನನ್ನ ಎಲ್ಲ ಸಿನಿಮಾಗಳಿಗೆ ಅವರೇ ವಿಗ್ ಮಾಡೋದು. ನಾನು ಇಂಡಸ್ಟ್ರಿಯಲ್ಲಿ ಇರೋತನಕ ಅವರು ನನ್ನ ಜೊತೆ ಇರ್ತಾರೆ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Apr 03, 2023 09:56 AM
Latest Videos