Video: ತಾಯಿ ಎನ್ನುವ ಕಿಂಚಿತ್ತೂ ಮಮಕಾರವಿಲ್ಲದೆ ದೊಣ್ಣೆಯಿಂದ ಹೊಡೆದು ಕೊಂದ ಮಗ

Updated on: Sep 17, 2025 | 12:32 PM

ಮಗನೊಬ್ಬ ತಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಮನೆಯ ಸಿಲಿಂಡರ್ ಮುಗಿದಿತ್ತು, ವೈಫೈ  ರೀಚಾರ್ಜ್​ ಮಾಡಿರಲಿಲ್ಲ. ಮಗನಿಗೆ ಜವಾಬ್ದಾರು ಇಲ್ಲ ಎನ್ನುವ  ಕುರಿತು  ವಾಗ್ವಾದ ಶುರುವಾಗಿತ್ತು. ಕೋಪದಲ್ಲಿ ದೊಣ್ಣೆಯಿಂದ ತಾಯಿಯನ್ನು ಹೊಡೆದು ಹತ್ಯೆ ಮಾಡಿದ್ದಾನೆ. ಕರ್ಧಾನಿಯ ಅರುಣ್ ವಿಹಾರ್ ಪ್ರದೇಶದಲ್ಲಿ ಈ ಭೀಕರ ಕೃತ್ಯ ನಡೆದಿದೆ. ಮಗ ನವೀನ್ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.

ಜೈಪುರ, ಸೆಪ್ಟೆಂಬರ್ 17: ಮಗನೊಬ್ಬ ತಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಮನೆಯ ಸಿಲಿಂಡರ್ ಮುಗಿದಿತ್ತು, ವೈಫೈ  ರೀಚಾರ್ಜ್​ ಮಾಡಿರಲಿಲ್ಲ. ಮಗನಿಗೆ ಜವಾಬ್ದಾರು ಇಲ್ಲ ಎನ್ನುವ  ಕುರಿತು  ವಾಗ್ವಾದ ಶುರುವಾಗಿತ್ತು. ಕೋಪದಲ್ಲಿ ದೊಣ್ಣೆಯಿಂದ ತಾಯಿಯನ್ನು ಹೊಡೆದು ಹತ್ಯೆ ಮಾಡಿದ್ದಾನೆ. ಕರ್ಧಾನಿಯ ಅರುಣ್ ವಿಹಾರ್ ಪ್ರದೇಶದಲ್ಲಿ ಈ ಭೀಕರ ಕೃತ್ಯ ನಡೆದಿದೆ. ಮಗ ನವೀನ್ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.

ಹಲ್ಲೆಯ ವೀಡಿಯೊ ಹೊರಬಿದ್ದಿದ್ದು, ನವೀನ್ ತಂದೆ ಮತ್ತು ಸಹೋದರಿ ತಡೆಯಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ತಾಯಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ತಲೆ ಹಾಗೂ ಕಿವಿ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಅವರು ಸಾವನ್ನಪ್ಪಿದ್ದಾರೆ.

ಪೊಲೀಸರ ಪ್ರಕಾರ, ನವೀನ್ ಮಾದಕ ವ್ಯಸನಿಯಾಗಿದ್ದಾನೆ. ಆತ 2020 ರಲ್ಲಿ ವಿವಾಹವಾಗಿದ್ದ. ಆದರೆ ಆತನೊಂದಿಗೆ ಜೀವನ ಸಾಗಿಸಲಾಗದೆ ಪತ್ನಿ ಮನೆ ಬಿಟ್ಟು ಹೋಗಿದ್ದಳು.ನವೀನ್ ಅವರ ತಂದೆ, ನಿವೃತ್ತ ಸೇನಾ ಸಿಬ್ಬಂದಿ, ಪ್ರಸ್ತುತ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ