ಸಿಖ್ಖರ ಮೆರವಣಿಗೆ ವೇಳೆ ಥಾರ್ ಕಾರಿನಲ್ಲಿ ಡಿಕ್ಕಿ; ಜನರಿಂದ ಪೊಲೀಸ್ ಮಗನ ವಾಹನ ಪುಡಿ ಪುಡಿ

Updated on: Jan 03, 2025 | 8:04 PM

ಪೊಲೀಸ್ ಅಧಿಕಾರಿಯ ಮಗ ಜೈಪುರದ ಆದರ್ಶ ನಗರದಲ್ಲಿ ಸಿಖ್ಖರ ಮೆರವಣಿಗೆ ವೇಳೆ ಮಹೀಂದ್ರಾ ಥಾರ್ ಅನ್ನು ಹತ್ತಿಸಿ, ಜನರನ್ನು ಗಾಯಗೊಳಿಸಿದ್ದಾನೆ. ಇದರಿಂದ ಕೋಪಗೊಂಡ ಜನಸಮೂಹವು ಕೆಂಪು ಮಹೀಂದ್ರ ಥಾರ್ ಅನ್ನು ಧ್ವಂಸಗೊಳಿಸಿದ ವೀಡಿಯೊ ವೈರಲ್ ಆಗಿದೆ. ಜೈಪುರದ ಆದರ್ಶ ನಗರದಲ್ಲಿ ಮೆರವಣಿಗೆ ನಡೆಸುತ್ತಿದ್ದ ಜನರಿಗೆ ಕಾರು ಡಿಕ್ಕಿ ಹೊಡೆದಾಗ ಆ ಕಾರನ್ನು ಪೊಲೀಸ್ ಅಧಿಕಾರಿಯ ಮಗ ಓಡಿಸುತ್ತಿದ್ದ ಎಂದು ವರದಿಗಳು ಹೇಳಿವೆ.

ಜೈಪುರ: ಜನವರಿ 2ರಂದು ಜೈಪುರದಲ್ಲಿ ಪೊಲೀಸ್ ಅಧಿಕಾರಿಯ ಮಗನು ಓಡಿಸಿದ ಕೆಂಪು ಮಹೀಂದ್ರಾ ಥಾರ್ ಸಿಖ್ಖರ ಮೆರವಣಿಗೆ ವೇಳೆ ಜನಸಂದಣಿಯ ಮೇಲೆ ನುಗ್ಗಿತು. ಇದರ ಪರಿಣಾಮವಾಗಿ ಇಬ್ಬರು ಗಾಯಗೊಂಡಿದ್ದಾರೆ. ಸಿಖ್ ಸಮುದಾಯದ ಸುಮಾರು 300 ಜನರು ಗುರುವಾರ ಸಂಜೆ ಕೀರ್ತನೆ ಮಾಡಲು ಜಮಾಯಿಸಿದ್ದರು. ಜೈಪುರದ ಆದರ್ಶನಗರ ಪ್ರದೇಶದಲ್ಲಿ ರಾತ್ರಿ 8.30ಕ್ಕೆ ಈ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯಲ್ಲಿ ಓರ್ವ ವೃದ್ಧ ಹಾಗೂ ಮಗು ಗಾಯಗೊಂಡಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More