6,6,6,6,6,6,6… IPLನಲ್ಲಿ ಠುಸ್… MLCಯಲ್ಲಿ ಬುಸ್..!

Updated on: Jun 24, 2025 | 8:31 AM

MLC ಟಿ20 ಲೀಗ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿರುವ ಜೇಕ್ ಪ್ರೇಸರ್ ಮೆಕ್​ಗುರ್ಕ್​ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಈ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಮೆಕ್​ಗುರ್ಕ್​ ಕಲೆಹಾಕಿದ್ದು ಕೇವಲ 55 ರನ್​ಗಳು ಮಾತ್ರ. ಅಂದರೆ ಕೇವಲ 9.17 ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದರು.

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಜೇಕ್ ಪ್ರೇಸರ್ ಮೆಕ್​ಗುರ್ಕ್​ ಸಿಡಿಲಬ್ಬರ ಮುಂದುವರೆದಿದೆ. ಈ ಬಾರಿಯ ಟೂರ್ನಿಯಲ್ಲಿ ಸ್ಯಾನ್​ ಫ್ರಾನಿಸ್ಕೋ ಯುನಿಕಾರ್ನ್ಸ್ ಪರ ಕಣಕ್ಕಿಳಿಯುತ್ತಿರುವ ಮೆಕ್​ಗುರ್ಕ್​ ಎಂಐ ನ್ಯೂಯಾರ್ಕ್ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವ ದಾಂಡಿಗ ಬರೋಬ್ಬರಿ 7 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ. ಈ ಏಳು ಸಿಕ್ಸ್ ಹಾಗೂ 1 ಫೋರ್​ನೊಂದಿಗೆ ಕೇವಲ 26 ಎಸೆತಗಳಲ್ಲಿ 64 ರನ್ ಚಚ್ಚಿದ್ದಾರೆ.

ಇದಕ್ಕೂ ಮುನ್ನ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಜೇಕ್ ಪ್ರೇಸರ್​ ಮೆಕ್​ಗುರ್ಕ್ 38 ಎಸೆತಗಳಲ್ಲಿ 88 ರನ್ ಚಚ್ಚಿದರು. ಈ ವೇಳೆ ಅವರ ಬ್ಯಾಟ್​ನಿಂದ ಮೂಡಿಬಂದ ಸಿಕ್ಸರ್​ಗಳ ಸಂಖ್ಯೆ ಬರೋಬ್ಬರಿ 11.  ಇದೀಗ ಮತ್ತೊಮ್ಮೆ ಅಬ್ಬರಿಸುವ ಮೂಲಕ ಮೆಕ್​ಗುರ್ಕ್ ಸಂಚಲನ ಸೃಷ್ಟಿಸಿದ್ದಾರೆ.

ಇನ್ನು ಜೇಕ್​ ಪ್ರೇಸರ್ ಮೆಕ್​ಗುರ್ಕ್ ಅವರ ಸ್ಪೋಟಕ ಅರ್ಧಶತಕದ ನೆರವಿನೊಂದಿಗೆ ಸ್ಯಾನ್​ ಫ್ರಾನಿಸ್ಕೋ ಯುನಿಕಾರ್ನ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 246 ರನ್ ಕಲೆಹಾಕಿದ್ದು, ಈ ಮೂಲಕ ಎಂಐ ನ್ಯೂಯಾರ್ಕ್ ತಂಡಕ್ಕೆ 247 ರನ್​ಗಳ ಕಠಿಣ ಗುರಿ ನೀಡಿದೆ.

ವಿಶೇಷ ಎಂದರೆ ಈ ಬಾರಿಯ ಐಪಿಎಲ್​ನಲ್ಲಿ ಜೇಕ್​ ಪ್ರೇಸರ್ ಮೆಕ್​ಗುರ್ಕ್​ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಮೆಕ್​ಗುರ್ಕ್​ ಕಲೆಹಾಕಿದ್ದು ಕೇವಲ 55 ರನ್​ಗಳು ಮಾತ್ರ. ಅಂದರೆ ಕೇವಲ 9.17 ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದರು.

ಇನ್ನು 6 ಪಂದ್ಯಗಳಲ್ಲಿ ಬಾರಿಸಿದ ಸಿಕ್ಸರ್​ಗಳ ಸಂಖ್ಯೆ ಕೇವಲ ಎರಡು. ಹಾಗೆಯೇ 7 ಫೋರ್​ಗಳನ್ನು ಮಾತ್ರ ಸಿಡಿಸಿದ್ದರು. ಆದರೆ ಇದೀಗ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 20 ಸಿಕ್ಸ್ ಸಿಡಿಸಿ ಮಿಂಚಿದ್ದಾರೆ.

Loading...
Unable to load recommendations.
Follow Us
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More