ಏಪ್ರಿಲ್ 22ಕ್ಕೆ ವಿಶ್ವಾದ್ಯಂತ ‘ಜೇಮ್ಸ್’ ಫ್ಯಾನ್ಸ್ ಶೋ ಆಯೋಜಿಸಲು ಚಿಂತನೆ
ಹೊಸ ತಂತ್ರಜ್ಞಾನ ಬಳಸಿ ಪುನೀತ್ ಧ್ವನಿಯನ್ನು ರೀ-ಕ್ರಿಯೇಟ್ ಮಾಡಲಾಗಿದೆ. ‘ಜೇಮ್ಸ್’ ಸಿನಿಮಾ ಏಪ್ರಿಲ್ 22ರಂದು ತೆರೆಗೆ ಬರುತ್ತಿದೆ. ಆ ದಿನ ವಿಶ್ವಾದ್ಯಂತ ಫ್ಯಾನ್ಸ್ ಶೋ ಮಾಡಲು ಚಿತ್ರತಂಡ ಯೋಚಿಸಿದೆ.
‘ಜೇಮ್ಸ್’ ಸಿನಿಮಾ (James Movie) ಥಿಯೇಟರ್ನಲ್ಲಿ ತೆರೆಕಂಡ ಬಳಿಕ ಒಟಿಟಿಯಲ್ಲೂ ರಿಲೀಸ್ ಆಗಿ ಸದ್ದು ಮಾಡಿತು. ಇದು ಪುನೀತ್ (Puneeth Rajkumar) ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ. ಈ ಕಾರಣಕ್ಕೆ ಫ್ಯಾನ್ಸ್ ಭಾವನಾತ್ಮಕವಾಗಿ ಸಿನಿಮಾ ಜತೆ ಕನೆಕ್ಟ್ ಆಗಿದ್ದಾರೆ. ಈ ಸಿನಿಮಾ ಈಗ ರೀ-ರಿಲೀಸ್ ಆಗುತ್ತಿದೆ. ‘ಜೇಮ್ಸ್’ ಸಿನಿಮಾ ಕೆಲಸಗಳು ಬಾಕಿ ಇರುವಾಗಲೇ ಪುನೀತ್ ನಿಧನ ಹೊಂದಿದ್ದರು. ಹೀಗಾಗಿ, ಪುನೀತ್ ಅವರ ಪಾತ್ರಕ್ಕೆ ಸಹೋದರ ಶಿವರಾಜ್ಕುಮಾರ್ (Shivarajkumar) ಧ್ವನಿ ನೀಡಿದ್ದರು. ಪುನೀತ್ ಧ್ವನಿ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಅನೇಕರು ಅಂದುಕೊಂಡಿದ್ದಿದೆ. ಇದು ಈಗ ನಿಜವಾಗುತ್ತಿದೆ. ಹೊಸ ತಂತ್ರಜ್ಞಾನ ಬಳಸಿ ಪುನೀತ್ ಧ್ವನಿಯನ್ನು ರೀ-ಕ್ರಿಯೇಟ್ ಮಾಡಲಾಗಿದೆ. ಈ ಸಿನಿಮಾ ಏಪ್ರಿಲ್ 22ರಂದು ತೆರೆಗೆ ಬರುತ್ತಿದೆ. ಆ ದಿನ ವಿಶ್ವಾದ್ಯಂತ ಫ್ಯಾನ್ಸ್ ಶೋ ಮಾಡಲು ಚಿತ್ರತಂಡ ಯೋಚಿಸಿದೆ.
ಇದನ್ನೂ ಓದಿ: ‘ಜೇಮ್ಸ್’ ಚಿತ್ರದಲ್ಲಿ ಅಪ್ಪು ವಾಯ್ಸ್ ರೀ-ಕ್ರಿಯೇಟ್; ಶಾಕ್ ಆದ ಅಶ್ವಿನಿ ಪುನೀತ್ ರಾಜ್ಕುಮಾರ್
Published on: Apr 18, 2022 03:46 PM