ರಣಜಿ ಟೂರ್ನಿಯಲ್ಲಿ ಹೊಸ ಇತಿಹಾಸ ಬರೆದ ಜಮ್ಮು-ಕಾಶ್ಮೀರ
99 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ದೆಹಲಿ ತಂಡವು 277 ರನ್ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಮೊದಲ ಇನಿಂಗ್ಸ್ನಲ್ಲಿ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 179 ರನ್ಗಳ ಗುರಿ ಪಡೆದ ಜಮ್ಮು-ಕಾಶ್ಮೀರ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ. ಈ ಮೂಲಕ 7 ವಿಕೆಟ್ಗಳ ಜಯ ಸಾಧಿಸಿ ದೆಹಲಿ ವಿರುದ್ಧ ಹೊಸ ಇತಿಹಾಸ ನಿರ್ಮಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿಯ ಗ್ರೂಪ್-ಡಿ ಪಂದ್ಯದಲ್ಲಿ ದೆಹಲಿ ವಿರುದ್ಧ ಜಮ್ಮು-ಕಾಶ್ಮೀರ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಜಮ್ಮು-ಕಾಶ್ಮೀರ ಹೊಸ ಇತಿಹಾಸವನ್ನು ಸಹ ನಿರ್ಮಿಸಿದೆ. ಅಂದರೆ 65 ವರ್ಷಗಳ ರಣಜಿ ಟೂರ್ನಿಯ ಇತಿಹಾಸದಲ್ಲಿ ಜಮ್ಮು-ಕಾಶ್ಮೀರ ಒಮ್ಮೆಯೂ ದೆಹಲಿ ವಿರುದ್ಧ ಜಯ ಸಾಧಿಸಿರಲಿಲ್ಲ. ಇದೀಗ ಬಲಿಷ್ಠ ಪಡೆಗೆ ಸೋಲುಣಿಸಿ ಹೊಸ ಅಧ್ಯಾಯ ಬರೆಯುವಲ್ಲಿ ಜಮ್ಮು-ಕಾಶ್ಮೀರ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಜಮ್ಮು-ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡವು ಪ್ರಥಮ ಇನಿಂಗ್ಸ್ನಲ್ಲಿ 211 ರನ್ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಜಮ್ಮು-ಕಾಶ್ಮೀರ 310 ರನ್ಗಳಿಸಿದ್ದರು.
99 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ದೆಹಲಿ ತಂಡವು 277 ರನ್ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಮೊದಲ ಇನಿಂಗ್ಸ್ನಲ್ಲಿ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 179 ರನ್ಗಳ ಗುರಿ ಪಡೆದ ಜಮ್ಮು-ಕಾಶ್ಮೀರ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ. ಈ ಮೂಲಕ 7 ವಿಕೆಟ್ಗಳ ಜಯ ಸಾಧಿಸಿ ದೆಹಲಿ ವಿರುದ್ಧ ಹೊಸ ಇತಿಹಾಸ ನಿರ್ಮಿಸಿದೆ.
ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮಿಂಚಿನ ದಾಳಿ ಸಂಘಟಿಸಿ ಕೇವಲ 35 ರನ್ಗಳಿಗೆ 5 ವಿಕೆಟ್ ಕಬಳಿಸಿದ ಆಕಿಬ್ ನಬಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ಜಮ್ಮು ಕಾಶ್ಮೀರ ಪ್ಲೇಯಿಂಗ್ 11: ಖಮ್ರಾನ್ ಇಕ್ಬಾಲ್ , ಶುಭಂ ಖಜುರಿಯಾ , ಪರಾಸ್ ಡೋಗ್ರ (ನಾಯಕ) ,
ಅಬ್ದುಲ್ ಸಮದ್ , ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್ ), ವಿವ್ರಾಂತ್ ಶರ್ಮಾ , ಅಬಿದ್ ಮುಷ್ತಾಕ್ , ಆಕಿಬ್ ನಬಿ, ವಂಶಜ್ ಶರ್ಮಾ , ಸಾಹಿಲ್ ಲೋತ್ರಾ , ಸುನಿಲ್ ಕುಮಾರ್.
ದೆಹಲಿ ಪ್ಲೇಯಿಂಗ್ 11: ಅರ್ಪಿತ್ ರಾಣಾ , ಸನತ್ ಸಾಂಗ್ವಾನ್ , ಯಶ್ ಧುಲ್ , ಆಯುಷ್ ದೋಸೆಜಾ ,
ಸುಮಿತ್ ಮಾಥುರ್ , ಆಯುಷ್ ಬದೋನಿ (ನಾಯಕ) , ಅನೂಜ್ ರಾವತ್ (ವಿಕೆಟ್ ಕೀಪರ್) , ಮನನ್ ಭಾರದ್ವಾಜ್ , ಹೃತಿಕ್ ಶೋಕೀನ್ , ಸಿಮರ್ಜೀತ್ ಸಿಂಗ್ , ಮನಿ ಗ್ರೆವಾಲ್.