ಜನಾರ್ಧನ ರೆಡ್ಡಿ ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ, ಪಕ್ಷದ ಟಿಕೆಟ್​ನಿಂದಲೇ ಸ್ಪರ್ಧಿಸುತ್ತಾರೆ: ಬಿ ಎಸ್ ಯಡಿಯೂರಪ್ಪ

Edited By:

Updated on: Dec 15, 2022 | 1:26 PM

ರೆಡ್ಡಿಯವರು ಪಕ್ಷದಲ್ಲಿರುವುದು ಎಷ್ಟು ಮಹತ್ವ ಅನ್ನೋದನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುತ್ತೇನೆ, ರಾಜ್ಯದಲ್ಲಿ ಪಕ್ಷದ ಸಂಘಟನೆಯಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಕೊಪ್ಪಳ: ನಗರದಲ್ಲಿಂದು ಮಾಧ್ಯಮದವರೊಡನೆ ಮಾತಾಡಿದ ರಾಜ್ಯ ಬಿಜೆಪಿಯ ವರಿಷ್ಠ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು (BS Yediyurappa) ಜನಾರ್ಧನ ರೆಡ್ಡಿ (Janardhan Reddy) ಅವರ ಪರ ಭರ್ಜರಿಯಾಗಿಯೇ ಬ್ಯಾಟ್ ಬೀಸಿದರು. ರೆಡ್ಡಿ ಪಕ್ಷವನ್ನು ಬಿಟ್ಟು ಎಲ್ಲೂ ಹೋಗಲ್ಲ, ಅವರು ಗಂಗಾವತಿಯಲ್ಲಿ (Gangavati) ಮನೆಕಟ್ಟಿದ್ದಾರೆ ಅಂದಮಾತ್ರಕ್ಕೆ ಹೊಸಪಕ್ಷ ಕಟ್ಟುತ್ತಾರೆ ಅಂತ ಅರ್ಥ ಕಲ್ಪಿಸಬಾರದು ಎಂದು ಯಡಿಯೂರಪ್ಪ ಹೇಳಿದರು. ರೆಡ್ಡಿಯವರು ಪಕ್ಷದಲ್ಲಿರುವುದು ಎಷ್ಟು ಮಹತ್ವ ಅನ್ನೋದನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುತ್ತೇನೆ, ರಾಜ್ಯದಲ್ಲಿ ಪಕ್ಷದ ಸಂಘಟನೆಯಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact

TV9 Kannada

Read More