‘ಆಯುಷ್’ ಸಿನಿಮಾ ವಿವಾದ ಬಗೆಹರಿದಿದ್ದು ಹೇಗೆ? ವಿವರಿಸಿದ ಜಯಮಾಲಾ
ಉಪೇಂದ್ರ ಅವರ ಪುತ್ರ ಆಯುಷ್ ನಟನೆಯ ‘ಆಯುಷ್’ ಚಿತ್ರದ ವಿವಾದ ಈಗ ಬಗೆಹರಿದಿದೆ. ಪ್ರಿಯಾಂಕಾ ಉಪೇಂದ್ರ ಮತ್ತು ನಿರ್ದೇಶಕ ಪುರುಷೋತ್ತಮ್ ನಡುವಿನ ಜಟಾಪಟಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಾಜಿ ಮಾಡಿಸಲಾಗಿದೆ. ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಧಾನ ಯಶಸ್ವಿ ಆಗಿದೆ.
ಆಯುಷ್ ಉಪೇಂದ್ರ ನಟನೆಯ ‘ಆಯುಷ್’ ಚಿತ್ರದ ವಿವಾದ ಈಗ ಬಗೆಹರಿದಿದೆ. ಪ್ರಿಯಾಂಕಾ ಉಪೇಂದ್ರ ಮತ್ತು ನಿರ್ದೇಶಕ ಪುರುಷೋತ್ತಮ್ ನಡುವಿನ ಜಟಾಪಟಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಾಜಿ ಮಾಡಿಸಲಾಗಿದೆ. ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಧಾನ ಯಶಸ್ವಿ ಆಗಿದೆ. ಆ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಎಲ್ಲವೂ ಸುಸೂತ್ರವಾಗಿ ಬಗೆಹರಿದಿದೆ. ಸೌಹಾರ್ದಯುತವಾಗಿ ಎಲ್ಲರೂ ಸಹಕರಿಸಿದ್ದಾರೆ. ಸಿನಿಮಾದಲ್ಲಿ ನೂರಾರು ಜನರ ಶ್ರಮ ಇದೆ. ಗೌರವಾನ್ವಿತ ಅಂಗಸಂಸ್ಥೆಯವರು, ಮಾಜಿ ಅಧ್ಯಕ್ಷರು ಸಹಕರಿಸಿದ್ದಾರೆ. ಇನ್ಮುಂದೆ ಪುರುಷೋತ್ತಮ್ ಕಥೆಗೂ, ನಿರ್ಮಾಪಕ ಅಭಿಷೇಕ್ ಅವರ ಕಥೆಗೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಇಬ್ಬರೂ ಒಮ್ಮತದಿಂದ ಒಪ್ಪಿಕೊಂಡಿದ್ದಾರೆ. ಸಂಭಾವನೆ ವಿವಾದ ಕೂಡ ಬಗೆಹರಿದಿದೆ’ ಎಂದು ಜಯಮಾಲಾ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
