HD Deve Gowda: ಗೆಲ್ಲುವ ಅಭ್ಯರ್ಥಿಗಳಿಗೆ ಹೆಚ್ಡಿ ದೇವೇಗೌಡರಿಂದ ಫೋನ್
ಮನೆಯಲ್ಲಿ ಕೂತು ಹೆಚ್.ಡಿ.ದೇವೇಗೌಡರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಬೇರೆ ಪಕ್ಷದವ್ರು ಜೆಡಿಎಸ್ ಅಭ್ಯರ್ಥಿ ಸಂಪರ್ಕಿಸುವ ಭೀತಿ ಹಿನ್ನೆಲೆ ಗೆಲ್ಲುವ ಅಭ್ಯರ್ಥಿಗಳಿಗೆ ಫೋನ್ ಕಾಲ್ ಮಾಡಿ ಚರ್ಚೆ ನಡೆಸಿದ್ದಾರೆ.
ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಸ್ವತಂತ್ರ ಸರ್ಕಾರದ ಲೆಕ್ಕಾಚಾರದಲ್ಲಿ ಮುಳುಗಿದ್ರೆ, ದಳಪತಿಗಳು ಮಾತ್ರ ಅತಂತ್ರ ಫಲಿತಾಂಶದ ಕನವರಿಕೆಯಲ್ಲಿದ್ದಾರೆ. ಈ ಬಾರಿಯೂ ಕುಮಾರಸ್ವಾಮಿಯೇ ಕಿಂಗ್ ಮೇಕರ್, ಕುಮಾರಸ್ವಾಮಿ ನೇತೃತ್ವ ಇಲ್ಲದೆ ಸರ್ಕಾರವೇ ರಚನೆ ಆಗಲ್ಲ ಎಂದು ಮೀಸೆ ತಿರುವುತಿದ್ದು, ಹೊಸ ರಾಜಕೀಯ ಅಂಕ ಗಣಿತ ಪಠಿಸುತ್ತಿದ್ದಾರೆ. ಮತ ಎಣಿಕೆಗೆ ಕೆಲವೇ ಗಂಟೆಗಳು ಬಾಕಿ ಇದ್ದು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಇದರ ನಡುವೆ ಮನೆಯಲ್ಲಿ ಕೂತು ಹೆಚ್.ಡಿ.ದೇವೇಗೌಡರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಬೇರೆ ಪಕ್ಷದವ್ರು ಜೆಡಿಎಸ್ ಅಭ್ಯರ್ಥಿ ಸಂಪರ್ಕಿಸುವ ಭೀತಿ ಹಿನ್ನೆಲೆ ಗೆಲ್ಲುವ ಅಭ್ಯರ್ಥಿಗಳಿಗೆ ಫೋನ್ ಕಾಲ್ ಮಾಡಿ ಚರ್ಚೆ ನಡೆಸಿದ್ದಾರೆ. ಫಲಿತಾಂಶದ ಬಗ್ಗೆ ಮಾತುಕತೆ ನಡೆಸಿದ್ದಾರೆ. ತಮ್ಮ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ಗೌಡರು ಕಸರತ್ತು ನಡೆಸುತ್ತಿದ್ದಾರೆ.
Loading...
Unable to load recommendations.
Follow Us
