Pancharatna Yatre: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ರಾಜಕೀಯವಾಗಿ ಪಳಗಿ ಪ್ರಬುದ್ಧತೆಯಿಂದ ಮಾತಾಡುತ್ತಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ

Updated on: Mar 20, 2023 | 6:41 PM

ಮೊನ್ನೆ ರಾಮನಗರ ಬಳಿಯ ಟೋಲ್ ನಾಕಾವೊಂದರ ಬಳಿ ಪ್ರತಿಭಟನೆ ನಡೆಸುವಾಗಲೂ ಅಧಿಕಾರಿಯೊಬ್ಬರೊಂದಿಗೆ ಅಳೆದು ತೂಗಿ ಮಾತಾಡಿದರು.

ಕೋಲಾರ: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ರಾಜಕೀಯವಾಗಿ ಪ್ರಬುದ್ಧರಾಗುತ್ತಿದ್ದಾರೆ (political maturity) ಅನ್ನೋದರಲ್ಲಿ ಎರಡು ಮಾತಿಲ್ಲ. ಕೋಲಾರದ ಬಂಗಾರಪೇಟೆಯಲ್ಲಿ ಅವರು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಎಲ್ ಆರ್ ಶಿವರಾಮೇಗೌಡರು (LR Shivaramegowda) ಜೆಡಿಎಸ್ ನಾಯಕರಿಗೆ ಬುದ್ಧಿ ಕಲಿಸುವ ಬಗ್ಗೆ ಆಡಿದ ಮಾತಿಗೆ ಬಹಳ ಪ್ರಬುದ್ಧವಾಗಿ ಉತ್ತರಿಸಿದರು. ಮೊದಲಾಗಿದ್ದರೆ ಇದೇ ಪ್ರಶ್ನೆಗೆ ಅವರು ಶಿವರಾಮೇಗೌಡರ ವಿರುದ್ಧ ಹರಿಹಾಯುತ್ತಿದ್ದರು ಮತ್ತು ಜನ್ಮ ಜಾಲಾಡುತ್ತಿದ್ದರು. ಆದರೆ, ಅವರು ಆಗಿನ ಆವೇಶ, ರೋಷ, ಉಡಾಫೆ ಪ್ರದರ್ಶಿಸದೆ ಒಬ್ಬ ಪಳಗಿದ ರಾಜಕಾರಣಿಯಂತೆ ಮಾತಾಡುತ್ತಿದ್ದಾರೆ. ಮೊನ್ನೆ ರಾಮನಗರ ಬಳಿಯ ಟೋಲ್ ನಾಕಾವೊಂದರ ಬಳಿ ಪ್ರತಿಭಟನೆ ನಡೆಸುವಾಗಲೂ ಅಧಿಕಾರಿಯೊಬ್ಬರೊಂದಿಗೆ ಅಳೆದು ತೂಗಿ ಮಾತಾಡಿದರು. ಬಂಗಾರಪೇಟೆಯಲ್ಲಿ ಅವರು ನೀಡಿದ ಪ್ರತಿಕ್ರಿಯೆಯನ್ನು ನೀವೇ ಆಲಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.