Jio AirFiber: ರಿಲಯನ್ಸ್​​ ಜಿಯೋ ಏರ್​ಫೈಬರ್ ಸೇವೆ​ ಶ್ಲಾಘಿಸಿದ ಓಪನ್‌ಸಿಗ್ನಲ್ ವರದಿ

|

Updated on: Jun 12, 2024 | 7:46 AM

ಜಿಯೋದ 5ಜಿ ನೆಟ್‌ವರ್ಕ್‌ನ ವೇಗವು ದೇಶದಲ್ಲಿಯೇ ಅತ್ಯಧಿಕವಾಗಿದೆ ಎಂದು ಓಪನ್ ಸಿಗ್ನಲ್ ಹೇಳಿದೆ. ದೇಶದಲ್ಲಿ ಜಿಯೋ ಏರ್​ಫೈಬರ್ ಸೇವೆಗಳು ₹599ರಿಂದ ಆರಂಭವಾಗುತ್ತವೆ. ಜತೆಗೆ ಒಟಿಟಿ, 4K ಟಿವಿ ಸೇವೆಗಳು ಕೂಡ ಲಭ್ಯವಾಗುತ್ತವೆ. 

ದೇಶದ ಖ್ಯಾತ ಉದ್ಯಮ ಸಂಸ್ಥೆ ರಿಲಯನ್ಸ್​ ಜಿಯೋ ಏರ್​ ಫೈಬರ್ ಸೇವೆಯನ್ನು ಮೊಬೈಲ್ ನೆಟ್‌ವರ್ಕ್ ಅನಲಿಟಿಕ್ಸ್ ಕಂಪನಿ ಓಪನ್‌ಸಿಗ್ನಲ್ ಶ್ಲಾಘಿಸಿದೆ. ಜತೆಗೆ ಜಿಯೋದ ಸ್ವತಂತ್ರ 5ಜಿ ನೆಟ್‌ವರ್ಕ್‌ನಿಂದಾಗಿ ಜಿಯೋ ಏರ್ ಫೈಬರ್ ತನ್ನ ಗ್ರಾಹಕರಿಗೆ ಅತ್ಯುತ್ತಮ ವೇಗದಲ್ಲಿ ಡೇಟಾವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಓಪನ್‌ಸಿಗ್ನಲ್ ವರದಿ ತಿಳಿಸಿದೆ. ಜಿಯೋ ಏರ್ ಫೈಬರ್‌ನ ವೇಗ ಮತ್ತು ಗುಣಮಟ್ಟದ ಸ್ಕೋರ್ 5ಜಿ ಮೊಬೈಲ್ ನೆಟ್‌ವರ್ಕ್‌ನಂತೆಯೇ ಉಳಿದಿದೆ. ಜಿಯೋದ 5ಜಿ ನೆಟ್‌ವರ್ಕ್‌ನ ವೇಗವು ದೇಶದಲ್ಲಿಯೇ ಅತ್ಯಧಿಕವಾಗಿದೆ ಎಂದು ಓಪನ್ ಸಿಗ್ನಲ್ ಹೇಳಿದೆ. ದೇಶದಲ್ಲಿ ಜಿಯೋ ಏರ್​ಫೈಬರ್ ಸೇವೆಗಳು ₹599ರಿಂದ ಆರಂಭವಾಗುತ್ತವೆ. ಜತೆಗೆ ಒಟಿಟಿ, 4K ಟಿವಿ ಸೇವೆಗಳು ಕೂಡ ಲಭ್ಯವಾಗುತ್ತವೆ.