Jio Finance: UPI ಪೇಮೆಂಟ್ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಫೈನಾನ್ಸ್ ಆ್ಯಪ್ ಎಂಟ್ರಿ
ಜಿಯೋ ಫೈನಾನ್ಸ್ ಅತ್ಯಾಧುನಿಕ ಪ್ಲಾಟ್ ಫಾರ್ಮ್ ಆಗಿದ್ದು, ದೈನಂದಿನ ಆರ್ಥಿಕ ವ್ಯವಹಾರಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್ ಜತೆಗೆ, ಯುಪಿಐ ವಹಿವಾಟುಗಳು, ಬಿಲ್ ಪಾವತಿ, ವಿಮಾ ಸಲಹೆಯನ್ನು ನೀಡಲಿದೆ. ಜತೆಗೆ ಉಳಿತಾಯ ಖಾತೆ ನಿರ್ವಹಣೆಯನ್ನೂ ಒಂದೇ ವೇದಿಕೆಯಲ್ಲಿ ಈ ಆ್ಯಪ್ ನೀಡಲಿದೆ.
ದೇಶದಲ್ಲಿ ಯುಪಿಐ ಮತ್ತು ಡಿಜಿಟಲ್ ಬ್ಯಾಂಕಿಂಗ್ ಬಳಕೆ ಹೆಚ್ಚುತ್ತಿದ್ದು, ರಿಲಯನ್ಸ್ ಸಂಸ್ಥೆ ನೂತನ ಯುಪಿಐ ಮತ್ತು ಡಿಜಿಟಲ್ ಬ್ಯಾಂಕಿಂಗ್ ಆ್ಯಪ್ ಬಿಡುಗಡೆ ಮಾಡಿದೆ. ಬೀಟಾ ಆವೃತ್ತಿಯ ಆ್ಯಪ್ ಇದಾಗಿದ್ದು, ಮುಂದೆ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ದೊರೆಯಲಿದೆ. ಜಿಯೋ ಫೈನಾನ್ಸ್ ಅತ್ಯಾಧುನಿಕ ಪ್ಲಾಟ್ ಫಾರ್ಮ್ ಆಗಿದ್ದು, ದೈನಂದಿನ ಆರ್ಥಿಕ ವ್ಯವಹಾರಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್ ಜತೆಗೆ, ಯುಪಿಐ ವಹಿವಾಟುಗಳು, ಬಿಲ್ ಪಾವತಿ, ವಿಮಾ ಸಲಹೆಯನ್ನು ನೀಡಲಿದೆ. ಜತೆಗೆ ಉಳಿತಾಯ ಖಾತೆ ನಿರ್ವಹಣೆಯನ್ನೂ ಒಂದೇ ವೇದಿಕೆಯಲ್ಲಿ ಈ ಆ್ಯಪ್ ನೀಡಲಿದೆ. ಜಿಯೋ ಫೈನಾನ್ಸ್ ಬಗ್ಗೆ ಹೆಚ್ಚಿನ ವಿವರ ವಿಡಿಯೊದಲ್ಲಿದೆ.