ಭಾರೀ ಮಳೆಗೆ ಬಳ್ಳಾರಿಯ ಸಂಡೂರು ಬಳಿ ಸೇತುವೆ ಕುಸಿದು ಜನ ಮತ್ತು ವಾಹನ ಸಂಚಾರಕ್ಕೆ ದೊಡ್ಡ ಅಡಚಣೆ!

ಕಳೆದ ರಾತ್ರಿ ಸುರಿದ ಭಾರೀ ಮಳೆಗೆ 2014 ರಲ್ಲಿ ಕಟ್ಟಿದ್ದ ಸೇತುವೆ ಕುಸಿದು ಬಿದ್ದಿದೆ. ತಿಮ್ಲಾಪುರ ಜನರಿಗೆ ಸಣ್ಣೂರಿಗೆ ಸಂಪರ್ಕ ಕಲ್ಪಿಸುವ ಏಕೈಕ ಸಾಧನ ಈ ಸೇತುವೆಯಾಗಿತ್ತು. ಅದು ಈ ಸ್ಥಿತಿ ತಲುಪಿರುವುದರಿಂದ ವಾಹನ ಸಂಚಾರ ನಿಂತಿದೆ, ವಾಹನಗಳ ಮಾತು ಹಾಗಿರಲಿ, ಜನ ತಮ್ಮ ಹೊಲಗದ್ದೆಗಳಿಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಲು ಎಷ್ಟೆಲ್ಲ ಪರದಾಡಬೇಕಿದೆ ಅನ್ನೋದನ್ನು ಗಮನಿಸಿ.

ಭಾರೀ ಮಳೆಗೆ ಬಳ್ಳಾರಿಯ ಸಂಡೂರು ಬಳಿ ಸೇತುವೆ ಕುಸಿದು ಜನ ಮತ್ತು ವಾಹನ ಸಂಚಾರಕ್ಕೆ ದೊಡ್ಡ ಅಡಚಣೆ!
|

Updated on: Jun 03, 2024 | 6:42 PM

ಬಳ್ಳಾರಿ: ಮಳೆಗಾಲದ ಮೊದಲ ಮಳೆಗೆ ರಾಜ್ಯದಲ್ಲಿ ಪರಿಸ್ಥಿತಿ ಹೀಗಿದೆ. ನಿಮಗೆ ದೃಶ್ಯಗಳಲ್ಲಿ ಕಾಣುತ್ತಿರೋದು ಜಿಲ್ಲೆಯ ಸಣ್ಣೂರು ತಾಲ್ಲೂಕಿನ (Sandur taluk) ತಿಮ್ಮಾಪುರ ಗ್ರಾಮದ ಸೇತುವೆ (Thimmalapur bridge). ನಮ್ಮ ಬಳ್ಳಾರಿ ವರದಿಗಾರ ಹೇಳುವ ಪ್ರಕಾರ ಇದು ಸೇತುವೆ ಬಹಳ ಹಳೆಯದೇನೂ ಅಲ್ಲ, ಕೇವಲ ಹತ್ತು ವರ್ಷಗಳ ಹಿಂದೆ (10 years back) ನಿರ್ಮಾಣಗೊಂಡಿದ್ದ ಸೇತುವೆ. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ 2014 ರಲ್ಲಿ ಕಟ್ಟಿದ್ದ ಸೇತುವೆ ಕುಸಿದು ಬಿದ್ದಿದೆ. ತಿಮ್ಲಾಪುರ ಜನರಿಗೆ ಸಣ್ಣೂರಿಗೆ ಸಂಪರ್ಕ ಕಲ್ಪಿಸುವ ಏಕೈಕ ಸಾಧನ ಈ ಸೇತುವೆಯಾಗಿತ್ತು. ಅದು ಈ ಸ್ಥಿತಿ ತಲುಪಿರುವುದರಿಂದ ವಾಹನ ಸಂಚಾರ ನಿಂತಿದೆ, ವಾಹನಗಳ ಮಾತು ಹಾಗಿರಲಿ, ಜನ ತಮ್ಮ ಹೊಲಗದ್ದೆಗಳಿಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಲು ಎಷ್ಟೆಲ್ಲ ಪರದಾಡಬೇಕಿದೆ ಅನ್ನೋದನ್ನು ಗಮನಿಸಿ. ಆ ಕಡೆಯಿಂದ ಬರುವ ವಾಹನಗಳನ್ನು ಬಂದ ದಾರಿಯಿಂದಲೇ ವಾಪಸ್ಸು ಕಳಿಸಲಾಗುತ್ತಿದೆಯಂತೆ. ತಿಮ್ಲಾಪುರ ಜನ ಆದಷ್ಟು ಬೇಗ ಹೊಸದಾಗಿ ಮತ್ತು ಕುಸಿದ್ದುಬಿದ್ದಿರುವುದಕ್ಕಿಂತ 20ಅಡಿ ಹೆಚ್ಚುವರಿ ಎತ್ತರದ ಸೇತುವೆ ನಿರ್ಮಾಣ ಮಾಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಿಕ್ಕಮಗಳೂರು: ರಾತ್ರಿ ಸುರಿದ ಭಾರೀ ಮಳೆಗೆ ಕೋಡಿ ಬಿದ್ದ ಯರದಕೆರೆ ಗ್ರಾಮದ ದೊಡ್ಡಮ್ಮ ದೇವಿ ಕೆರೆ, ಗ್ರಾಮ ಜಲಾವೃತ

Follow us