ಎಕ್ಸಿಟ್ ಪೋಲ್ ಗಳು ಗೊಂದಲ ಸೃಷ್ಟಿಸಿವೆ, ಅವಸರ ಯಾಕೆ? ನಾಳೆ ಮಧ್ಯಾಹ್ನ ಎಲ್ಲ ಗೊತ್ತಾಗಲಿದೆ: ಸತೀಶ್ ಜಾರಕಿಗೊಳಿ

ಸಾಮಾಜಿಕ ಜಾಲತಾಣಗಳಂತೂ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ ಎಂದು ಹೇಳಿವೆ, ಅದರೆ ಇನ್ನೂ ಹತ್ತೆನರಡು ತಾಸುಗಳಲ್ಲಿ ಎಲ್ಲ ಗೊತ್ತಾಗಲಿದೆ, ನಾಳೆ ಮಧ್ಯಾಹ್ನದವರೆಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ, ಅಲ್ಲಿಯವರೆಗೆ ಮಾತಾಡೋದು ಬೇಡ ಎಂದು ಜಾರಕಿಹೊಳಿ ಹೇಳಿದರು.

ಎಕ್ಸಿಟ್ ಪೋಲ್ ಗಳು ಗೊಂದಲ ಸೃಷ್ಟಿಸಿವೆ, ಅವಸರ ಯಾಕೆ? ನಾಳೆ ಮಧ್ಯಾಹ್ನ ಎಲ್ಲ ಗೊತ್ತಾಗಲಿದೆ: ಸತೀಶ್ ಜಾರಕಿಗೊಳಿ
|

Updated on: Jun 03, 2024 | 5:26 PM

ಬೆಳಗಾವಿ: ಎಕ್ಸಿಟ್ ಪೋಲ್ ಗಳು (Exit polls) ಬಿಜೆಪಿ 350 ಪ್ಲಸ್ ಸೀಟುಗಳನ್ನು ನೀಡಿವೆ ಅಂತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರಿಗೆ ಹೇಳಿದಾಗ, ಮತದಾನೋತ್ತರ ಸಮೀಕ್ಷೆಗಳು ಜನಲ್ಲಿ ಬಹಳ ಗೊಂದಲ ಮೂಡಿಸಿವೆ, ಕೆಲ ಸಮೀಕ್ಷೆಗಳು ಕಾಂಗ್ರೆಸ್ ಗೆಲ್ಲುತ್ತದೆ ಅಂತ ಹೇಳಿದರೆ ಕೆಲವು ಬಿಜೆಪಿ ಎಂದಿವೆ, ಹೀಗಾಗಿ ಜನ ಕನ್ಪ್ಯೂಸ್ಡ್ ಆಗಿದ್ದಾರೆ ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳಂತೂ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ ಎಂದು ಹೇಳಿವೆ, ಅದರೆ ಇನ್ನೂ ಹತ್ತೆನರಡು ತಾಸುಗಳಲ್ಲಿ ಎಲ್ಲ ಗೊತ್ತಾಗಲಿದೆ, ನಾಳೆ ಮಧ್ಯಾಹ್ನದವರೆಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ, ಅಲ್ಲಿಯವರೆಗೆ ಮಾತಾಡೋದು ಬೇಡ ಎಂದು ಜಾರಕಿಹೊಳಿ ಹೇಳಿದರು. ಸಮೀಕ್ಷೆಗಳ ಮೇಲೆ ಚರ್ಚೆ ನಡೆಸುವುದರಲ್ಲೂ ಅರ್ಥವಿಲ್ಲ, ಯಾಕೆಂದರೆ ಅವು ಮತದಾರನ ಮೇಲೆ ಯಾವುದೇ ಪರಿಣಾಮ ಬೀರಲ್ಲ, ಮತದಾರ ತನ್ನ ನಿರ್ಧಾರ ಈಗಾಗಲೇ ತಿಳಿಸಿಬಿಟ್ಟಿದ್ದಾನೆ ಮತ್ತು ಅದು ಮತಪೆಟ್ಟಿಗೆಗಳಲ್ಲಿ ಕೈದಾಗಿದೆ ಎಂದು ಸಚಿವ ಹೇಳಿದರು. ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (Priyanka Jarkiholi) ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಸಮೀಕ್ಷೆಗಳ ಪ್ರಕಾರ ಅವರು ಗೆಲ್ಲಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೆಯುಡಬ್ಲ್ಯೂಜೆ ಸಂವಾದ: ಮೌಢ್ಯ ಮತ್ತು ಮೂಢನಂಬಿಕೆಗಳ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

Follow us
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ