ಯಾವುದೇ ತಪ್ಪು ಮಾಡಿಲ್ಲ ಅಂತಾದ್ರೆ ಪ್ರಜ್ವಲ್ ಮತ್ತು ಭವಾನಿ ರೇವಣ್ಣಗೆ ಕಾನೂನು ಎದುರಿಸಲು ಏನು ಧಾಡಿ? ಪ್ರಿಯಾಂಕ್ ಖರ್ಗೆ

ಯಾವುದೇ ತಪ್ಪು ಮಾಡಿಲ್ಲ ಅಂತಾದ್ರೆ ಪ್ರಜ್ವಲ್ ಮತ್ತು ಭವಾನಿ ರೇವಣ್ಣಗೆ ಕಾನೂನು ಎದುರಿಸಲು ಏನು ಧಾಡಿ? ಪ್ರಿಯಾಂಕ್ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 03, 2024 | 6:05 PM

ದು ಸಾಮಾನ್ಯ ಕುಟುಂಬವಲ್ಲ, ದೇವೇಗೌಡರು ದೇಶದ ಪ್ರಧಾನಿಯಾಗಿದ್ದವರು, ಕುಮಾರಸ್ವಾಮಿ ಎರಡೆರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ರೇವಣ್ಣ ಸಹ ಮಂತ್ರಿಯಾಗಿದ್ದವರು, ಪ್ರಜ್ವಲ್ ಸಂಸದ ಮತ್ತು ಸೂರಜ್ ವಿಧಾನ ಪರಿಷತ್ ಸದಸ್ಯ. ಹೀಗಾಗಿ ಕುಟುಂಬವು ಕಾನೂನು ಪಾಲನೆಯಲ್ಲಿ ಬೇರೆಯವರಿಗೆ ಮಾದರಿಯಾಗಿರಬೇಕು, ವೃಥಾ ನೈತಿಕತೆ ಬೋಧಿಸುವುದರಲ್ಲಿ ಅರ್ಥವಿಲ್ಲ ಎಂದು ಖರ್ಗೆ ಹೇಳಿದರು.

ಬೆಂಗಳೂರು: ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಲಾಗಿದೆ ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆದಿದೆ ಎಂದು ಹೇಳುವ ಹೆಚ್ ಡಿ ದೇವೇಗೌಡ (HD Devegowda) ಕುಟುಂಬದ ಸದಸ್ಯರು ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿರುವುದ್ಯಾಕೆ? ಮಾಧ್ಯಮಗಳ ಮುಂದೆ ಬಂದಾಗ ನಮ್ಮಿಂದ ಏನೂ ತಪ್ಪು ನಡೆದಿಲ್ಲ, ಕಾನೂನಿನ ಸಮರ (legal battle) ನಡೆಸಿ ನಿರ್ದೋಷಿಗಳೆಂದು ಸಾಬೀತು ಮಾಡುತ್ತೇವೆ ಅನ್ನುತ್ತಾರೆ ಅದರೆ ಕಾನೂನು ಪ್ರಕ್ರಿಯೆ ಎದುರಿಸಲು ಮಾತ್ರ ಸಿದ್ಧರಿಲ್ಲ, ಇದು ಏನನ್ನು ತೋರಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕೇಳಿದರು. ಮೊದಲು ಪ್ರಜ್ವಲ್ ರೇವಣ್ಣ ಒಂದು ತಿಂಗಳು ನಾಪತ್ತೆಯಾಗಿ ರಾಹುಲ್ ಗಾಂಧಿ ಹೆಸರು ಹೇಳುತ್ತಾ ವಾಪಸ್ಸು ಬರುತ್ತಾರೆ. ಅವರು ಬಂದ ಮೇಲೆ ಭವಾನಿ ರೇವಣ್ಣ ನಾಪತ್ತೆ! ಅವರೆಲ್ಲಿದ್ದಾರೆ ಅಂತ ಗೊತ್ತಿಲ್ಲ. ಏನೂ ತಪ್ಪು ಮಾಡಿಲ್ಲವೆಂದರೆ ಹೀಗೆ ತಪ್ಪಿಸಿಕೊಳ್ಳೋದು ಯಾಕೆ? ಇದು ಸಾಮಾನ್ಯ ಕುಟುಂಬವಲ್ಲ, ದೇವೇಗೌಡರು ದೇಶದ ಪ್ರಧಾನಿಯಾಗಿದ್ದವರು, ಕುಮಾರಸ್ವಾಮಿ ಎರಡೆರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ರೇವಣ್ಣ ಸಹ ಮಂತ್ರಿಯಾಗಿದ್ದವರು, ಪ್ರಜ್ವಲ್ ಸಂಸದ ಮತ್ತು ಸೂರಜ್ ವಿಧಾನ ಪರಿಷತ್ ಸದಸ್ಯ. ಹೀಗಾಗಿ ಕುಟುಂಬವು ಕಾನೂನು ಪಾಲನೆಯಲ್ಲಿ ಬೇರೆಯವರಿಗೆ ಮಾದರಿಯಾಗಿರಬೇಕು, ವೃಥಾ ನೈತಿಕತೆ ಬೋಧಿಸುವುದರಲ್ಲಿ ಅರ್ಥವಿಲ್ಲ ಎಂದು ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕುಮಾರಸ್ವಾಮಿ ಮನೆಮಗ ತಪ್ಪು ಮಾಡಿದ್ದಾನೆ, ಅವರ ಕುಟುಂಬದವರೇ ರಾಜೀನಾಮೆ ನೀಡಬೇಕು: ಪ್ರಿಯಾಂಕ್ ಖರ್ಗೆ