ಬುರ್ಕಾ ಧರಿಸಿ ಡ್ರಗ್ಸ್ ಪಾರ್ಟಿ ಕೇಸ್ ವಿಚಾರಣೆಗೆ ಬಂದ ನಟಿ ಹೇಮಾ; ಬಂಧಿಸಿದ ಪೊಲೀಸರು
ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಹೇಮಾ ಭಾಗಿ ಆಗಿದ್ದರು. ಈ ಕೇಸ್ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಾಗ ಹೇಮಾ ಬುರ್ಕಾ ಧರಿಸಿ ಬಂದಿದ್ದಾರೆ. ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜನರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹೇಮಾ ಇಲ್ಲಸಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಬಂಧನದ ಬಳಿಕ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಅವರ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ.
ರೇವ್ ಪಾರ್ಟಿ ವಿವಾದದಲ್ಲಿ ಸಿಲುಕಿದ ತೆಲುಗು ನಟಿ ಹೇಮಾ ಅವರಿಗೆ ಈಗ ಸಂಕಷ್ಟ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಹೇಮಾರನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್. ಫಾರ್ಮ್ಹೌಸ್ನಲ್ಲಿ ರೇವ್ ಪಾರ್ಟಿ ಮಾಡಿದ ಆರೋಪದಲ್ಲಿ ಅವರ ಬಂಧನ (Hema Arrest) ಆಗಿದೆ. ಈ ಕೇಸ್ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ 2 ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ಇಂದು (ಜೂನ್ 3) ಬುರ್ಕಾ ಧರಿಸಿ ಹೇಮಾ ಬಂದಿದ್ದಾರೆ. ಜನರಿಗೆ ಮುಖ ಕಾಣಬಾರದು ಎಂಬ ಉದ್ದೇಶದಿಂದ ಅವರು ಬುರ್ಕಾ ಧರಿಸಿದ್ದಾರೆ. ಪಾರ್ಟಿಯಲ್ಲಿ ಹೇಮಾ (Hema) ಡ್ರಗ್ಸ್ ಸೇವಿಸಿದ್ದರು ಎಂಬುದು ವೈದ್ಯಕೀಯ ವರದಿಯಲ್ಲಿ ಖಚಿತವಾಗಿದೆ. ಅಲ್ಲದೇ ಡ್ರಗ್ಸ್ ಪಾರ್ಟಿಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು ಎಂಬ ಮಾಹಿತಿ ಇದೆ. ರೇವ್ ಪಾರ್ಟಿ (Bengaluru Rave Party) ನಡೆದ ಸ್ಥಳದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾಗಲೂ ಹೇಮಾ ಕಳ್ಳಾಟ ಆಡಿದ್ದರು. ಅದೇ ಫಾರ್ಮ್ಹೌಸ್ನ ಆವರಣದಲ್ಲಿ ವಿಡಿಯೋ ಮಾಡಿ, ‘ನಾನು ಹೈದರಾಬಾದ್ನ ಫಾರ್ಮ್ಹೌಸ್ನಲ್ಲಿ ಇದ್ದೇನೆ. ಯಾವ ರೇವ್ ಪಾರ್ಟಿಗೂ ಹೋಗಿಲ್ಲ’ ಎಂದು ಸುಳ್ಳು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.