ಕುಮಾರಸ್ವಾಮಿ ಮನೆಮಗ ತಪ್ಪು ಮಾಡಿದ್ದಾನೆ, ಅವರ ಕುಟುಂಬದವರೇ ರಾಜೀನಾಮೆ ನೀಡಬೇಕು: ಪ್ರಿಯಾಂಕ್ ಖರ್ಗೆ
ಇಷ್ಟೆಲ್ಲ ನಡೆದರೂ ಬಿಜೆಪಿ ನಾಯಕರು ನಾಚಿಕೆಯನ್ನು ಬದಿಗಿಟ್ಟು ವಿಧಾನ ಪರಿಷತ್ ಚುನಾವನೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಿದ್ದಾರೆ, ಇದರರ್ಥ, ಪ್ರಜ್ವಲ್ ರೇವಣ್ಣನ ಕೃತ್ಯಗಳ ಬಗ್ಗೆ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿದ್ದರೂ ಟಿಕೆಟ್ ನೀಡಿದ್ದರು ಎಂದು ಖರ್ಗೆ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಜಿ ಪರಮೇಶ್ವರ್ ರಾಜೀನಾಮೆ ಕೊಡಬೇಕೆಂದು ಅವರು ಹೇಳುತ್ತಿದ್ದಾರೆ, ಅಸಲಿಗೆ ರಾಜೀನಾಮೆ ಕೊಡಬೇಕಿರುವುದು ಕುಮಾರಸ್ವಾಮಿ (HD Kumaraswamy), ಹೆಚ್ ಡಿ ರೇವಣ್ಣ ಮತ್ತು ಸೂರಜ್ ರೇವಣ್ಣ; ನಮ್ಮ ಮನೆ ಮಗನಿಂದ ಅಪರಾಧ ನಡೆದಿದೆ, ಕುಟುಂಬಕ್ಕೆ ಮೆತ್ತಿರುವ ಕಳಂಕ ದೂರವಾಗುವವರೆಗೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಬೇಕು ಎಂದು ಖರ್ಗೆ ಹೇಳಿದರು. ಅಶ್ಲೀಲ ಕೃತ್ಯಗಳನ್ನೆಸಗಿದವನೇ ಅದನ್ನು ಶೂಟ್ ಮಾಡಿದ್ದಾನೆ, ಮತ್ಯಾರೋ ಅದನ್ನು ಡೌನ್ ಲೋಡ್ ಮಾಡಿಕೊಂಡು ಪೆನ್ ಡ್ರೈವ್ ಗಳಲ್ಲಿ ಅಪ್ ಲೋಡ್ ಮಾಡಿ ಜನರಿಗೆ ಹಂಚಿದ್ದಾರೆ. ಇದರಲ್ಲಿ ಬಿಜೆಪಿ ಮಾಜಿ ಶಾಸಕನ ಕೈವಾಡವಿರುವುದು ಗೊತ್ತಾಗುತ್ತಿದೆ ಎಂದು ಖರ್ಗೆ ಹೇಳಿದರು. ಇಷ್ಟೆಲ್ಲ ನಡೆದರೂ ಬಿಜೆಪಿ ನಾಯಕರು ನಾಚಿಕೆಯನ್ನು ಬದಿಗಿಟ್ಟು ವಿಧಾನ ಪರಿಷತ್ ಚುನಾವನೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಿದ್ದಾರೆ, ಇದರರ್ಥ, ಪ್ರಜ್ವಲ್ ರೇವಣ್ಣನ ಕೃತ್ಯಗಳ ಬಗ್ಗೆ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿದ್ದರೂ ಟಿಕೆಟ್ ನೀಡಿದ್ದರು ಎಂದು ಖರ್ಗೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ