Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ರಿಕಾ ಗೋಷ್ಠಿ ನಡೆಸಿದ ಮಂಗಳೂರು ಎಸ್ಪಿ ರಿಷ್ಯಂತ್ ಕಾಂಗ್ರೆಸ್ ವಕ್ತಾರನಂತೆ ಮಾತಾಡಿದ್ದಾರೆ: ಹರೀಶ್ ಪೂಂಜಾ, ಶಾಸಕ

ಪತ್ರಿಕಾ ಗೋಷ್ಠಿ ನಡೆಸಿದ ಮಂಗಳೂರು ಎಸ್ಪಿ ರಿಷ್ಯಂತ್ ಕಾಂಗ್ರೆಸ್ ವಕ್ತಾರನಂತೆ ಮಾತಾಡಿದ್ದಾರೆ: ಹರೀಶ್ ಪೂಂಜಾ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 03, 2024 | 7:56 PM

ತಮ್ಮನ್ನು ಬಂಧಿಸಲು ಕೇವಲ ಮೂರು ಪೊಲೀಸ್ ಅಧಿಕಾರಿಗಳನ್ನು ಮಾತ್ರ ಕಳಿಸಲಾಗಿತ್ತು ಅಂತ ಹೇಳಿದ್ದಾರೆ ಎಂದರು. ತಮ್ಮ ಮನೆಯಲ್ಲಿ ಸಿಸಿಟಿವಿ ಕೆಮೆರಾಗಳನ್ನು ಅಳವಡಿಸಲಾಗಿದೆ. ಫುಟೇಜ್ ತೆಗೆದು ನೋಡಿದರೆ ಅವರು ಹೇಳಿದ್ದು ನಿಜವೋ ಸುಳ್ಳೋ ಅನ್ನೋದು ಗೊತ್ತಾಗುತ್ತದೆ. ತನ್ನ ಮನೆಯ ಬಳಿ ಜಾಸ್ತಿ ಜನ ಸೇರಿದ ಕಾರಣ ಬಲಪ್ರಯೋಗ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು ಅಂತ ಎಸ್ ಪಿ ಹೇಳಿದ್ದಾರೆ ಎಂದು ಶಾಸಕ ಹೇಳಿದರು.

ಮಂಗಳೂರು: ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ (CM Rishyanth) ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Harish Poonja) ನಡುವೆ ಸಮರ ಮುಂದುವರಿದಿದೆ. ಪೊಲೀಸ್ ಅಧಿಕಾರಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಸತ್ಯಕ್ಕೆ ದೂರವಾದ ಸಂಗತಿಗಳನ್ನು ಹೇಳಿದ್ದಾರೆ, ಅವರು ಐಪಿಎಸ್ ಪಾಸು ಮಾಡಿರುವ ಪೊಲೀಸ್ ಅಧಿಕಾರಿ ಅದರೆ ಪತ್ರಿಕಾ ಗೋಷ್ಟಿಯಲ್ಲಿ ಕಾಂಗ್ರೆಸ್ ವಕ್ತಾರನ (Congress spokesperson) ಹಾಗೆ ಮಾತಾಡಿದ್ದಾರೆ ಎಂದು ಶಾಸಕ ಹೇಳಿದರು. ರಿಷ್ಯಬ್ ಮಾತಾಡಿದ್ದನ್ನು ಕೇಳಿದ ನಂತರವೇ ಈ ಪ್ರತಿಕಾ ಗೋಷ್ಠಿ ನಡೆಸುವ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದ ಹರೀಶ್, ತಮ್ಮನ್ನು ಬಂಧಿಸಲು ಕೇವಲ ಮೂರು ಪೊಲೀಸ್ ಅಧಿಕಾರಿಗಳನ್ನು ಮಾತ್ರ ಕಳಿಸಲಾಗಿತ್ತು ಅಂತ ಹೇಳಿದ್ದಾರೆ ಎಂದರು. ತಮ್ಮ ಮನೆಯಲ್ಲಿ ಸಿಸಿಟಿವಿ ಕೆಮೆರಾಗಳನ್ನು ಅಳವಡಿಸಲಾಗಿದೆ. ಫುಟೇಜ್ ತೆಗೆದು ನೋಡಿದರೆ ಅವರು ಹೇಳಿದ್ದು ನಿಜವೋ ಸುಳ್ಳೋ ಅನ್ನೋದು ಗೊತ್ತಾಗುತ್ತದೆ. ತನ್ನ ಮನೆಯ ಬಳಿ ಜಾಸ್ತಿ ಜನ ಸೇರಿದ ಕಾರಣ ಬಲಪ್ರಯೋಗ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು ಅಂತ ಎಸ್ ಪಿ ಹೇಳಿದ್ದಾರೆ ಎಂದು ಶಾಸಕ ಹೇಳಿದರು.

ಅಸಲಿಗೆ ತಮ್ಮನ್ನು ಬಂಧಿಸಲು 15 ಜನ ಪೊಲೀಸರು 3-4 ಸಲ ಬಂದಿದ್ದರು, ಸಾಯಂಕಾಲ 7ಗಂಟೆಯವರೆಗೆ ತನ್ನ ಮನೆಯಲ್ಲೇ ಇದ್ದರು ಮತ್ತು ಜನ ಪ್ರತಿನಿಧಿಯಾಗಿರುವ ತನ್ನನ್ನು ಬಂಧಿಸುವ ಮೊದಲು ನೋಟೀಸ್ ಜಾರಿ ಮಾಡಬೇಕಾಗುತ್ತದೆ ಅಂತ ತಮ್ಮ ವಕೀಲರು ಹೇಳಿದ ಬಳಿಕ ವಾಪಸ್ಸು ಹೋದರು ಎಂದು ಹರೀಶ್ ಹೇಳಿದರು. ಅವರದ್ದೇ ಪಕ್ಷದ ನಾಯಕರೊಬ್ಬರ ಅಗ್ರಹದ ಮೇರೆಗೆ ಬಂಧಿಸಲಿಲ್ಲ ಅಂತಲೂ ಎಸ್ ಪಿ, ಹೇಳಿದ್ದಾರೆ, ಅವರು ದಯವಿಟ್ಟು ನಮ್ಮ ನಾಯಕರ ಹೆಸರು ಹೇಳಬೇಕು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹರೀಶ್ ಪೂಂಜಾ ಮನೆಮುಂದೆ ಪೊಲೀಸರೊಂದಿಗೆ ಶಾಸಕನ ಬೆಂಬಲಿಗರ ವಾಗ್ವಾದ, ದೊಂಬಿಯಂಥ ಸನ್ನಿವೇಶ!